ಅಮೆರಿಕದ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

Update: 2022-09-23 06:10 GMT
Photo:PTI

ಮುಂಬೈ: ಶುಕ್ರವಾರದ ಆರಂಭಿಕ ವಹಿವಾಟಿನಲ್ಲೇ ಮೊದಲ ಬಾರಿ ಭಾರತದ ರೂಪಾಯಿ ಮೌಲ್ಯವು 44 ಪೈಸೆ ಕುಸಿದಿದೆ.ಅಮೆರಿಕದ ಡಾಲರ್ ಎದುರು 81.18ಕ್ಕೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಕರೆನ್ಸಿಯ ಬಲ, ದೇಶೀಯ ಶೇರುಗಳಲ್ಲಿನ ನಕಾರಾತ್ಮಕ ಪ್ರವೃತ್ತಿ ಹಾಗೂ ಉಕ್ರೇನ್ ನಲ್ಲಿನ ಭೌಗೋಳಿಕ ರಾಜಕೀಯಅಪಾಯದ ಹೆಚ್ಚಳವು ದೇಶೀಯ ಕರೆನ್ಸಿಯ ಮೌಲ್ಯ ಕುಸಿತಕ್ಕೆ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತರ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯವು 81.08 ರಂತೆ ವಹಿವಾಟು ಆರಂಭಿಸಿ 44 ಪೈಸೆ ಕುಸಿತ ಕಂಡು 81.23ಕ್ಕೆ ಇಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News