ವಿದಾಯದ ಪಂದ್ಯದಲ್ಲಿ ಕೌರ್ ಜೊತೆ ಟಾಸ್ ಹಾರಿಸಲು ಬಂದ ಜೂಲನ್ ಗೋಸ್ವಾಮಿ

Update: 2022-09-24 16:14 GMT
Photo:twitter

ಲಂಡನ್, ಸೆ.24: ಇಂಗ್ಲೆಂಡ್ ವಿರುದ್ಧ ಶನಿವಾರ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನಾಡುವ ಮೂಲಕ ಭಾರತದ ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ಕ್ರಿಕೆಟಿಗೆ ವಿದಾಯ ಹೇಳಲಿದ್ದಾರೆ. ಇಂದು ವಿದಾಯದ ಪಂದ್ಯದಲ್ಲಿ ಟಾಸ್ ಹಾರಿಸಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಗೋಸ್ವಾಮಿ ಕೂಡ ಮೈದಾನಕ್ಕೆ ಆಗಮಿಸಿದರು. ಇಂಗ್ಲೆಂಡ್ ನಾಯಕ ಆ್ಯಮಿ ಜೋನ್ಸ್ ಜೊತೆ ನಿಂತರು.

ಜೂಲನ್ ಗೋಸ್ವಾಮಿ ಜನವರಿ 2002ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ಕ್ರಿಕೆಟಿಗೆ ಕಾಲಿಟ್ಟಿದ್ದರು. ಶನಿವಾರ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ವಿದಾಯದ ಪಂದ್ಯವನ್ನಾಡಿದರು. ಪಂದ್ಯ ಆರಂಭಕ್ಕೆ ಮೊದಲು ತಂಡದ ಆಟಗಾರ್ತಿಯರನ್ನು ಉದ್ದೇಶಿಸಿ ಗೋಸ್ವಾಮಿ ಮಾತನಾಡಿದರು. ಆಗ 2009ರಲ್ಲಿ ಜುಲನ್ ನಾಯಕತ್ವದಲ್ಲಿ ಕ್ರಿಕೆಟಿಗೆ ಕಾಲಿಟ್ಟಿದ್ದ ಕೌರ್ ಕಣ್ಣೀರಿಟ್ಟರು. ಇದೇ ವೇಳೆ ಗೋಸ್ವಾಮಿ ಸಹ ಆಟಗಾರ್ತಿಯರಿಂದ ಗೌರವ ರಕ್ಷೆ ಪಡೆದರು.

ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತವು 3ನೇ ಪಂದ್ಯವನ್ನು ಜಯಿಸಿ 2 ದಶಕಗಳ ಕಾಲ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಗೋಸ್ವಾಮಿಗೆ ಸೂಕ್ತ ವಿದಾಯ ಹೇಳಲು ಬಯಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News