'ನೈಜ' ಶಿವಸೇನೆ ಪ್ರಕರಣ: ಉದ್ಧವ್ ಠಾಕ್ರೆ ಬಣಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ

Update: 2022-09-27 12:03 GMT
ಉದ್ಧವ್ ಠಾಕ್ರೆ (File Photo: PTI)

ಹೊಸದಿಲ್ಲಿ: ನಿಜವಾದ ಶಿವಸೇನೆ(Shiv Sena) ಯಾರಿಗೆ ಸೇರಿದ್ದು ಎಂಬ ಕುರಿತು ನಿರ್ಧರಿಸುವುದರಿಂದ ಚುನಾವಣಾ ಆಯೋಗವನ್ನು ತಡೆಯಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದ್ದು ಈ ಬೆಳವಣಿಗೆ ಮಾಜಿ ಸಿಎಂ ಉದ್ಧವ್ ಠಾಕ್ರೆ(Uddhav Thackera) ನೇತೃತ್ವದ ಶಿವಸೇನೆ ಬಣಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

'ನಿಜವಾದ' ಶಿವಸೇನೆ ಮತ್ತು ಅದರ ಚಿಹ್ನೆ ತನ್ನದೆಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ನೇತೃತ್ವದ ಬಣ ಹೇಳಿಕೊಳ್ಳುತ್ತಿರುವುದರಿಂದ ಈ ಕುರಿತು ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳುವುದನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟಿಗೆ ಉದ್ಧವ್ ಬಣ ಮನವಿ ಮಾಡಿತ್ತು.

ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆಗಸ್ಟ್ 23 ರಂದು ಪಂಚ ಸದಸ್ಯರ  ಸಾಂವಿಧಾನಿಕ ಪೀಠಕ್ಕೆ ವಹಿಸಿತ್ತು. ಈ ಪ್ರಕರಣವು ಪಕ್ಷಾಂತರ, ವಿಲೀನ ಮತ್ತು ಅನರ್ಹತೆಗೆ ಸಂಬಂಧಿಸಿದ ಹಲವಾರು ಸಾಂವಿಧಾನಿಕ ಪ್ರಶ್ನೆಗಳನ್ನೆತ್ತುವುದರಿಂದ ಈ ಕ್ರಮಕೈಗೊಳ್ಲಲಾಗಿತ್ತು.

ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಇನ್ನೊಂದು ಪಕ್ಷದ ಜೊತೆಗೆ ವಿಲೀನಗೊಂಡರೆ ಮಾತ್ರ ಏಕನಾಥ್ ಶಿಂಧೆ ಬಣಕ್ಕೆ ನಿಷ್ಠರಾಗಿರುವ ಶಾಸಕರು ಅನರ್ಹತೆಯನ್ನು ತಪ್ಪಿಸಬಹುದಾಗಿದೆ ಎಂದು ಠಾಕ್ರೆ ಬಣ ವಾದಿಸಿದ್ದರೆ, ತಮ್ಮ ಸ್ವಂತ ಪಕ್ಷದ ವಿಶ್ವಾಸವನ್ನು ಕಳೆದುಕೊಂಡಿರುವ ನಾಯಕರೊಬ್ಬರಿಗೆ ಪಕ್ಷಾಂತರ ತಡೆ ಕಾಯಿದೆ ಅಸ್ತ್ರವಾಗಲು ಸಾಧ್ಯವಿಲ್ಲ ಎಂದು ಶಿಂಧೆ ಬಣ ವಾದಿಸಿತ್ತು.

ಇದನ್ನೂ ಓದಿ: ಯೂಟ್ಯೂಬರ್ ಧ್ರುವ್‌ ವೀಡಿಯೋ ಸೇರಿದಂತೆ 45 ವೀಡಿಯೋಗಳನ್ನು ನಿರ್ಬಂಧಿಸಲು ಯೂಟ್ಯೂಬ್‌ಗೆ ಸೂಚಿಸಿದ ಕೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News