ಎನ್‌ಎಸ್‌ಇ ಪ್ರಕರಣ: ಚಿತ್ರಾ ರಾಮಕೃಷ್ಣ, ಆನಂದ್ ಸುಬ್ರಮಣಿಯನ್ ಗೆ ದಿಲ್ಲಿ ಹೈಕೋರ್ಟ್ ಜಾಮೀನು

Update: 2022-09-28 06:31 GMT
 ಚಿತ್ರಾ ರಾಮಕೃಷ್ಣ, Photo:twitter

ಹೊಸದಿಲ್ಲಿ: ಸಿಬಿಐ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಕೊ-ಲೊಕೇಶನ್ ಪ್ರಕರಣದಲ್ಲಿ ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಹಾಗೂ  ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ಅವರಿಗೆ ದಿಲ್ಲಿ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.

ಎನ್‌ಎಸ್‌ಇಯ ಇಬ್ಬರು ಮಾಜಿ ಅಧಿಕಾರಿಗಳಿಗೆ "ಕಾನೂನುಬದ್ಧ ಜಾಮೀನು" ನೀಡುತ್ತಿದ್ದೇನೆ ಎಂದು ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರು ಹೇಳಿದರು.

ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.

ದೇಶದ ಅತಿದೊಡ್ಡ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿನ ಅಕ್ರಮಗಳ ಬಗ್ಗೆ ಮೇ 2018 ರಲ್ಲಿ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್‌ಗಳಿಂದ ಸ್ಟಾಕ್ ಬ್ರೋಕರ್‌ಗಳಿಗೆ ಮಾಹಿತಿಯ ಅಸಮರ್ಪಕ ಪ್ರಸರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಫೆಬ್ರವರಿ 24 ರಂದು ಸುಬ್ರಮಣಿಯನ್ ನನ್ನು ಸಿಬಿಐ ಬಂಧಿಸಿತ್ತು.

ವಿಚಾರಣಾ ನ್ಯಾಯಾಲಯವು ಚಿತ್ರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಒಂದು ದಿನದ ನಂತರ ಮಾರ್ಚ್ 6 ರಂದು ಸಿಬಿಐ ಚಿತ್ರಾರನ್ನು ಬಂಧಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News