ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ನಾಮಪತ್ರ ಸ್ವೀಕರಿಸಿದ ದಿಗ್ವಿಜಯ್ ಸಿಂಗ್

Update: 2022-09-29 07:52 GMT
Photo:PTI

ಹೊಸದಿಲ್ಲಿ: ಹಿರಿಯ ನಾಯಕ ಹಾಗೂ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ Digvijaya Singh ಕಾಂಗ್ರೆಸ್ ಅಧ್ಯಕ್ಷ  ಹುದ್ದೆಗೆ ಅಕ್ಟೋಬರ್ 17 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು  ಇಂದು ನಾಮಪತ್ರಗಳನ್ನು ಸಂಗ್ರಹಿಸಲು ಆಗಮಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ನಾಳೆ ನಾಮಪತ್ರ ಸಲ್ಲಿಸುವುದಾಗಿ ದಿಗ್ವಿಜಯ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. "ನಾನು ನಾಮಪತ್ರಗಳನ್ನು ಪಡೆಯಲು ಬಂದಿದ್ದೇನೆ" ಎಂದು ಸಿಂಗ್ ಹೇಳಿದರು.

ದಿಗ್ವಿಜಯ ಸಿಂಗ್ ಅವರು ಶಶಿ ತರೂರ್ ಅವರನ್ನು ಎದುರಿಸುವ ನಿರೀಕ್ಷೆಯಿದೆ. ತರೂರ್ ಅವರು ನಾಳೆ ತಮ್ಮ ಪತ್ರಗಳನ್ನು ಸಲ್ಲಿಸುವ ಸಾಧ್ಯತೆಯಿದೆ.

ಸಿಂಗ್ ಇದುವರೆಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿರಲಿಲ್ಲ. " ನಾನು ಯಾರೊಂದಿಗೂ ಚರ್ಚೆ ಮಾಡಿಲ್ಲ, ಹೈಕಮಾಂಡ್ ಅನುಮತಿ ಕೇಳಿಲ್ಲ ಎಂದು ಹೇಳಿದ್ದಾರೆ.

75 ವರ್ಷ ವಯಸ್ಸಿನ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಅಶೋಕ್ ಗೆಹ್ಲೋಟ್ ಅವರಂತೆಯೇ ಗಾಂಧಿ ಕುಟುಂಬದ ದೀರ್ಘಕಾಲದ ನಿಷ್ಠಾವಂತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News