ಅಪಘಾತದಲ್ಲಿ ಗಾಯಗೊಂಡಿದ್ದ ಮಗುವನ್ನು ಕಂಡು ಕಣ್ಣೀರಿಟ್ಟ ಐಎಎಸ್ ಅಧಿಕಾರಿ: ವೀಡಿಯೊ ವೈರಲ್

Update: 2022-09-29 12:58 GMT

ಹೊಸದಿಲ್ಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಟ್ರಕ್ ಹಾಗೂ  ಬಸ್ ಡಿಕ್ಕಿಯಾಗಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 12 ಮಂದಿಯನ್ನು ಲಕ್ನೋದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದ್ದು, ಇತರರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳನ್ನು ದಾಖಲು  ಮಾಡಿದ್ದ ಲಕ್ನೊ ಆಸ್ಪತ್ರೆಗೆ ದೌಡಾಯಿಸಿದ  ಲಕ್ನೋ ವಿಭಾಗೀಯ ಆಯುಕ್ತೆ ರೋಷನ್ ಜೇಕಬ್  Lucknow Divisional Commissioner Roshan Jacob  ಗಾಯಾಳುಗಳ ಕುಟುಂಬಗಳೊಂದಿಗೆ ಮಾತನಾಡುತ್ತಿದ್ದಾಗ ಕಣ್ಣೀರಿಟ್ಟ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪಘಾತದಲ್ಲಿ ಗಾಯಗೊಂಡ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿದ ಜೇಕಬ್, ಮಗುವಿನ ತಾಯಿಯನ್ನು ಸಮಾಧಾನಪಡಿಸಿದರು. ಮಗುವಿನ ಪರಿಸ್ಥಿತಿ ಕಂಡು ಕಣ್ಣೀರಾಗಿದ್ದಾರೆ.  ಮಗುವಿನ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು. ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ.

ತಿರುವನಂತಪುರದಲ್ಲಿ ಜನಿಸಿದ ಜೇಕಬ್ 2004ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಎರಡು ವಾರಗಳ ಹಿಂದೆ ಅವರು ಲಕ್ನೋದ ಜಲಾವೃತ ಬೀದಿಗಳನ್ನು ಪರಿಶೀಲಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು

ಉತ್ತರಪ್ರದೇಶ ಪೊಲೀಸರ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 730 ರ ಐರಾ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಬಸ್ ಧೌರ್ಹರಾದಿಂದ ಲಕ್ನೋಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News