ಆಟಿಕೆ ತುತ್ತೂರಿಗಳನ್ನು ಊದಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರಿಗೆ ಪೊಲೀಸರು ನೀಡಿದ ಶಿಕ್ಷೆ ಏನು ಗೊತ್ತೇ?

Update: 2022-10-07 12:22 GMT
Screengrab(Twitter/@ANI)

ಜಬಲ್ಪುರ್: ಆಟಿಕೆ ತುತ್ತೂರಿಗಳನ್ನು ಜೋರಾಗಿ ಊದಿ ಸಾರ್ವಜನಿಕ ತೊಂದರೆಯುಂಟು ಮಾಡುತ್ತಿದ್ದ ಯುವಕರಿಗೆ ಮಧ್ಯಪ್ರದೇಶದ ಜಬಲ್ಪುರ ಪೊಲೀಸರು ಅವರಿಗೆ ನೀಡಿದ ಶಿಕ್ಷೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೋದಲ್ಲಿ ಪೊಲೀಸರು ಮಿನಿ ಆಟಿಕೆ ತುತ್ತೂರಿಗಳನ್ನು ಆ ಯುವಕರ ಕಿವಿಗಳಿಗೆ ಹತ್ತಿರ ಊದಿ ಅದೆಷ್ಟು ಕಿರಿಕಿರಿಯುಂಟು ಮಾಡುತ್ತದೆ ಎಂದು ಅವರಿಗೆ ಮನವರಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಯುವಕರಿಗೆ ಪರಸ್ಪರರ ಕಿವಿಗಳಲ್ಲಿ ಈ ತುತ್ತೂರಿ ಊದುವಂತೆಯೂ ಪೊಲೀಸರು ಮಾಡಿದ್ದಾರೆ ಎಂದು ವರದಿಯಾಗಿದೆ.

ಇದರ ಹೊರತಾಗಿ ರಸ್ತೆ ಮಧ್ಯದಲ್ಲಿಯೇ ಈ ಯುವಕರಿಗೆ ಬಸ್ಕಿ ತೆಗೆಯುವ ಶಿಕ್ಷೆಯನ್ನೂ ನೀಡಿದ್ದಾರೆ.

ಈ ಯುವಕರ ಬಳಿಯಿರುವ ಆಟಿಕೆ ತುತ್ತೂರಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವರ ಹಾಗೆ ಸಾರ್ವಜನಿಕರಿಗೆ ತುತ್ತೂರಿ ಊದಿ ತೊಂದರೆಯುಂಟು ಮಾಡುವವರಿಗೆ ಶಿಕ್ಷೆ ಕಾದಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News