ಎಲಾನ್ ಮಸ್ಕ್ ಟ್ವಿಟರ್‌ನ್ನೇಕೆ ಖರೀದಿಸುತ್ತಿದ್ದಾರೆ?

ಅವರ ಪೂರ್ಣ ಉತ್ತರ ಮತ್ತು ತಾರ್ಕಿಕತೆ ಇಲ್ಲಿದೆ

Update: 2022-10-28 13:13 GMT

ಬಿಲಿಯಾಧಿಪತಿ ಎಲಾನ್ ಮಸ್ಕ್ (Elon Musk) ಈಗ ಟ್ವಿಟರ್‌ನ (Twitter) ಅಧಿಕೃತ ಮಾಲಕರಾಗಿದ್ದಾರೆ. ಇದಕ್ಕೂ ಮುನ್ನ ತಾನೇಕೆ ಈ ಸಾಮಾಜಿಕ ಮಾಧ್ಯಮ ಕಂಪನಿಯನ್ನು ಖರೀದಿಸುತ್ತಿದ್ದೇನೆ ಎನ್ನುವುದನ್ನು ವಿವರಿಸಿ ಟಿಪ್ಪಣಿಯೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

ಜಾಹೀರಾತುದಾರರನ್ನು ಉದ್ದೇಶಿಸಿ ಮಸ್ಕ್ ಈ ಟಿಪ್ಪಣಿಯನ್ನು ಬರೆದಿದ್ದಾರಾದರೂ ವಾಸ್ತವದಲ್ಲಿ ಅದು ಟ್ವಿಟರ್ ಖರೀದಿಗೆ ಅವರ ತಾರ್ಕಿಕತೆಯನ್ನು ವಿವರಿಸಿದೆ. ನಾಗರಿಕತೆ ಮತ್ತು ಮಾನವೀಯತೆಗೆ ಟ್ವಿಟರ್ ಏಕೆ ಮಹತ್ವದ್ದಾಗಿದೆ ಮತ್ತು ತಾನು ಅದನ್ನು ಹೇಗೆ ನಡೆಸಲು ಉದ್ದೇಶಿಸಿದ್ದೇನೆ ಎನ್ನುವುದನ್ನು ಅವರು ಈ ಟಿಪ್ಪಣಿಯಲ್ಲಿ ಮತ್ತೆ ಹೇಳಿದ್ದಾರೆ. ಅವರ ಪೂರ್ಣ ಟಿಪ್ಪಣಿ ಇಲ್ಲಿದೆ....

ಟ್ವಿಟರ್‌ನ್ನು ಸ್ವಾಧೀನಪಡಿಸಿಕೊಳ್ಳಲು ನನ್ನ ಪ್ರೇರಣೆಯನ್ನು ಹಂಚಿಕೊಳ್ಳಲು ವೈಯಕ್ತಿಕವಾಗಿ ತಲುಪಲು ನಾನು ಬಯಸಿದ್ದೇನೆ. ಟ್ವಿಟರ್‌ನ್ನು ನಾನೇಕೆ ಖರೀದಿಸಿದ್ದೇನೆ ಮತ್ತು ಜಾಹೀರಾತುಗಳ ಬಗ್ಗೆ ನನ್ನ ಚಿಂತನೆ ಏನು ಎನ್ನುವುದರ ಕುರಿತು ವ್ಯಾಪಕ ಊಹಾಪೋಹಗಳಿವೆ. ಅವುಗಳಲ್ಲಿ ಹೆಚ್ಚಿನವು ತಪ್ಪಾಗಿವೆ.

ಹಿಂಸಾಚಾರಕ್ಕಿಳಿಯದೆ ನಂಬಿಕೆಗಳ ವ್ಯಾಪಕ ಶ್ರೇಣಿಯ ಕುರಿತು ಆರೋಗ್ಯಪೂರ್ಣ ಚರ್ಚೆ ನಡೆಸಲು ಸಾಮಾನ್ಯ ಡಿಜಿಟಲ್ ವೇದಿಕೆಯನ್ನು ಹೊಂದಿರುವುದು ನಾಗರಿಕತೆಯ ಭವಿಷ್ಯಕ್ಕೆ ಮಹತ್ವದ್ದಾಗಿದೆ ಎನ್ನುವುದು ನಾನು ಟ್ವಿಟರ್ ಖರೀದಿಸಲು ಕಾರಣವಾಗಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಹೆಚ್ಚು ದ್ವೇಷವನ್ನು ಸೃಷ್ಟಿಸುವ ಮತ್ತು ನಮ್ಮ ಸಮಾಜವನ್ನು ವಿಭಜಿಸುವ ತೀರ ಬಲಪಂಥೀಯ ಅಥವಾ ತೀರ ಎಡಪಂಥೀಯ ವಿಚಾರಧಾರೆಗಳನ್ನು ಪ್ರತಿಬಿಂಬಿಸುವ ಭಾರೀ ಅಪಾಯವಿದೆ.

ನಿರಂತರ ಕ್ಲಿಕ್‌ಗಳ ಅನ್ವೇಷಣೆಯಲ್ಲಿ ಹೆಚ್ಚಿನ ಸಾಂಪ್ರದಾಯಿಕ ಮಾಧ್ಯಮಗಳು ಆ ಧ್ರುವೀಕೃತ ವಿಪರೀತಗಳನ್ನು ಉತ್ತೇಜಿಸಿವೆ ಮತ್ತು ಅವುಗಳ ಅಗತ್ಯಗಳನ್ನು ಪೂರೈಸಿವೆ, ಏಕೆಂದರೆ ಅದು ಹಣವನ್ನು ತರುತ್ತದೆ ಎಂದು ಅವು ಭಾವಿಸಿವೆ. ಆದರೆ ಹಾಗೆ ಮಾಡುವಾಗ ಸಂಭಾಷಣೆಗೆ ಅವಕಾಶವು ಕಳೆದುಹೋಗಿದೆ.

ಇದೇ ಕಾರಣದಿಂದ ನಾನು ಟ್ವಿಟರ್ ಖರೀದಿಸಿದ್ದೇನೆ. ನನಗೆ ಅದು ಸುಲಭ ಎಂಬ ಕಾರಣಕ್ಕೆ ನಾನದನ್ನು ಮಾಡಿಲ್ಲ. ನಾನು ಪ್ರೀತಿಸುವ ಮಾನವೀಯತೆಗೆ ನೆರವಾಗಲು ನಾನು ಅದನ್ನು ಮಾಡಿದ್ದೇನೆ. ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಈ ಗುರಿಯ ಬೆನ್ನತ್ತುವಲ್ಲಿ ವೈಫಲ್ಯವು ಅತ್ಯಂತ ನಿಜವಾದ ಸಾಧ್ಯತೆಯಾಗಿದೆ ಎನ್ನುವುದನ್ನು ಗುರುತಿಸಿ ನಾನದನ್ನು ನಮ್ರತೆಯಿಂದ ಮಾಡುತ್ತೇನೆ.

ಇದನ್ನೂ ಓದಿ: ಟ್ವಿಟರ್ ಕಚೇರಿಗೆ ಸಿಂಕ್ ಹಿಡಿದುಕೊಂಡು ಪ್ರವೇಶಿಸಿದ ಎಲಾನ್ ಮಸ್ಕ್ !

ನಿಸ್ಸಂಶಯವಾಗಿ ಟ್ವಿಟರ್ ಯಾವುದೇ ಪರಿಣಾಮಗಳ ಬಗ್ಗೆ ಯೋಚಿಸದೆ ಏನು ಬೇಕಾದರೂ ಹೇಳಬಹುದಾದ ಎಲ್ಲರಿಗೂ ಮುಕ್ತ ವೇದಿಕೆಯಾಗಿರಲು ಸಾಧ್ಯವಿಲ್ಲ. ನೆಲದ ಕಾನೂನುಗಳನ್ನು ಪಾಲಿಸುವ ಜೊತೆಗೆ ನಮ್ಮ ವೇದಿಕೆಯು ಎಲ್ಲರಿಗೂ ಬೆಚ್ಚಗಿನ ಸ್ವಾಗತವನ್ನು ನೀಡುವಂತಿರಬೇಕು,ಅಲ್ಲಿ ನೀವು ನಿಮ್ಮ ಆದ್ಯತೆಗಳಿಗೆ ಅನುಗುಣವಾಗಿ ನಿಮ್ಮ ಇಚ್ಛೆಯ ಅನುಭವವನ್ನು ಆಯ್ಕೆ ಮಾಡಿಕೊಳ್ಳಬಹುದು.

ಜಾಹೀರಾತನ್ನು ಸರಿಯಾಗಿ ರೂಪಿಸಿದಾಗ ಅದು ಸಂತೋಷ, ಮನೋರಂಜನೆ ಮತ್ತು ಮಾಹಿತಿಯನ್ನು ನೀಡುತ್ತದೆ ಎಂದು ನಾನು ಗಟ್ಟಿಯಾಗಿ ನಂಬಿದ್ದೇನೆ. ಅದು ಅಸ್ತಿತ್ವದಲ್ಲಿದೆ ಎಂದು ನಿಮಗೆಂದೂ ಗೊತ್ತಿರದ,ಆದರೆ ನಿಮಗೆ ಸೂಕ್ತವಾದ ಸೇವೆ ಅಥವಾ ಉತ್ಪನ್ನ ಅಥವಾ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಬಲ್ಲದು. ಇದು ನಿಜವಾಗಬೇಕಿದ್ದರೆ,ಟ್ವಿಟರ್ ಬಳಕೆದಾರರಿಗೆ ಅವರ ಅವಶ್ಯಕತೆಗಳಿಗೆ ಸಾಧ್ಯವಾದಷ್ಟು ಸುಸಂಗತವಾದ ಜಾಹೀರಾತುಗಳನ್ನು ತೋರಿಸುವುದು ಅಗತ್ಯವಾಗಿದೆ. ಕಡಿಮೆ ಸುಸಂಗತೆಯ ಜಾಹೀರಾತುಗಳು ಸ್ಪ್ಯಾಮ್ ಆಗಿರುತ್ತವೆ, ಆದರೆ ಹೆಚ್ಚು ಸುಸಂಗತ ಜಾಹೀರಾತುಗಳು ವಾಸ್ತವದಲ್ಲಿ ವಿಷಯವಾಗಿರುತ್ತವೆ. ಮೂಲಭೂತವಾಗಿ ಟ್ವಿಟರ್ ನಿಮ್ಮ ಬ್ರಾಂಡ್‌ನ್ನು ಬಲಗೊಳಿಸುವ ಮತ್ತು ನಿಮ್ಮ ಉದ್ಯಮವನ್ನು ಬೆಳೆಸುವ ವಿಶ್ವದ ಅತ್ಯಂತ ಗೌರವಾನ್ವಿತ ವೇದಿಕೆಯಾಗಲು ಬಯಸುತ್ತಿದೆ. ನಮ್ಮಿಂದಿಗೆ ಪಾಲುದಾರರಾಗಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ನಾವೆಲ್ಲ ಸೇರಿ ಅಸಾಧಾರಣವಾದುದನ್ನು ನಿರ್ಮಿಸೋಣ.

ಇದನ್ನೂ ಓದಿ: ಸತ್ತ ಹಲ್ಲಿ ಬಿದ್ದ ಆಹಾರ ಸೇವನೆ: ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥ

Similar News