ತೆಲಂಗಾಣ: ಸತ್ತ ಹಲ್ಲಿ ಬಿದ್ದ ಆಹಾರ ಸೇವನೆ: ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥ
ಹೈದರಾಬಾದ್: ತೆಲಂಗಾಣದ ಜನಗಾಂವ್ ಜಿಲ್ಲೆಯ ದೇವರುಪ್ಪುಲಾ ಗ್ರಾಮದ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಸತ್ತ ಹಲ್ಲಿ ಬಿದ್ದ ಆಹಾರ ಸೇವನೆಯ ನಂತರ ಸುಮಾರು 12 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 26 ರ ಗುರುವಾರ ರಾತ್ರಿ ಸೌತೆಕಾಯಿ ಚಟ್ನಿಯನ್ನು ಶಾಲಾ ಮಕ್ಕಳಿಗೆ ನೀಡಲಾಯಿತು. ಮೂಲಗಳ ಪ್ರಕಾರ, ಆಹಾರದಲ್ಲಿ ಹಲ್ಲಿಯ ಅವಶೇಷಗಳು ಕಂಡುಬಂದಿವೆ.
ವಿದ್ಯಾರ್ಥಿಗಳು ಅಸ್ವಸ್ಥರಾದ ತಕ್ಷಣ ಅವರನ್ನು ಚಿಕಿತ್ಸೆಗಾಗಿ ಜನಗಾಂವ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಮಕ್ಕಳ ಆರೋಗ್ಯ ಸದ್ಯ ಸ್ಥಿರವಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
Next Story