2022ರ ಹೆಚ್ಚಿನ ಅವಧಿಗೆ ಹವಾಮಾನ ವೈಪರೀತ್ಯಗಳಿಗೆ ಸಾಕ್ಷಿಯಾದ ಭಾರತ: 2,700ಕ್ಕೂ ಅಧಿಕ ಮಂದಿ ಸಾವು

Update: 2022-11-03 13:02 GMT

ಹೊಸದಿಲ್ಲಿ: ಈ ವರ್ಷದ ಶೇ.88ರಷ್ಟು ದಿನಗಳಲ್ಲಿ ಹಮಾಮಾನ ಬದಲಾವಣೆಯಿಂದಾಗಿ ಉಂಟಾದ ಉಷ್ಣಮಾರುತಗಳು ಮತ್ತು ನೆರೆ ಪ್ರಕೋಪದಂತಹ ಅತಿಯಾದ ಹವಾಮಾನ ವೈಪರೀತ್ಯ (Extreme Weather) ಘಟನೆಗಳಿಗೆ ಭಾರತವು (India) ಸಾಕ್ಷಿಯಾಗಿದೆ ಎಂದು ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್‌ಇ) ಮತ್ತು ಡೌನ್ ಟು ಅರ್ತ್ ನ.1ರಂದು ಪ್ರಕಟಿಸಿರುವ ವರದಿಯು ತಿಳಿಸಿದೆ. ಜ.1 ಮತ್ತು ಸೆ.30ರ ನಡುವೆ ಇಂತಹ ಘಟನೆಗಳಿಗೆ ದೇಶಾದ್ಯಂತ 2,755 ಜನರು ಬಲಿಯಾಗಿದ್ದು,18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.

ಈ ವರ್ಷದಲ್ಲಿಯ ಹವಾಮಾನ ವೈಪರೀತ್ಯ ಘಟನೆಗಳು ಮತ್ತು ಅವುಗಳಿಂದ ಉಂಟಾದ ನಷ್ಟ ಮತ್ತು ಹಾನಿಗಳ ಕಾಲೋಚಿತ,ಮಾಸಿಕ ಮತ್ತು ಪ್ರಾದೇಶಿಕ ವಿಶ್ಲೇಷಣೆಯನ್ನು ಒದಗಿಸಲು ವರದಿಯು ಸರಕಾರಿ ದಾಖಲೆಗಳು ಮತ್ತು ಸುದ್ದಿ ವರದಿಗಳನ್ನು ಬಳಸಿಕೊಂಡಿದೆ.

ನಷ್ಟ ಮತ್ತು ಹಾನಿಗಳ ಅಧ್ಯಯನ ಮಾಡುವ ವಿಜ್ಞಾನಿಗಳು ಹೇಳುವಂತೆ ವರದಿಯು ಸಕಾಲಿಕವಾಗಿದೆ ಹಾಗೂ ಸಾವುಗಳು ಮತ್ತು ಬೆಳೆ ನಷ್ಟದಂತಹ ನೇರ ಪರಿಣಾಮಗಳನ್ನು ಲೆಕ್ಕ ಹಾಕುತ್ತದೆ. ಆದಾಗ್ಯೂ ಅದು ಹವಾಮಾನ ವೈಪರೀತ್ಯ ಘಟನೆಗಳಿಂದ ಸಂಭವಿಸಿದ ಮಾನವ ಸಾವುಗಳು ಮತ್ತು ಮಾನಸಿಕ ಒತ್ತಡದಂತಹ ಪರೋಕ್ಷ ಪರಿಣಾಮಗಳನ್ನು ಒಳಗೊಂಡಿಲ್ಲ, ಏಕೆಂದರೆ ಅವುಗಳನ್ನು ದಾಖಲಿಸಲು ಯಾವುದೇ ಕಾರ್ಯವಿಧಾನವಿಲ್ಲ.

ಹೀಗಾಗಿ ವರದಿಯು ನಷ್ಟ ಮತ್ತು ಹಾನಿಯನ್ನು ಲೆಕ್ಕ ಹಾಕಲು ಉತ್ತಮ ವಿಧಾನಗಳ ಅಗತ್ಯವನ್ನು ಪ್ರಮುಖವಾಗಿ ಬಿಂಬಿಸಿದೆ ಮತ್ತು ಈಜಿಪ್ತ್‌ನಲ್ಲಿ ನ.8ರಿಂದ ಆರಂಭಗೊಳ್ಳಲಿರುವ 27ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ27) ನಲ್ಲಿ ಈ ವಿಷಯದ ಕುರಿತು ಚರ್ಚೆಯಲ್ಲಿ ಈ ವಿಷಯಗಳನ್ನು ಸೇರಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಶಾಲೆಯನ್ನು ತೊರೆದ ಚಿಕ್ಕಮಕ್ಕಳ ಸಂಖ್ಯೆ ಒಂದೇ ವರ್ಷದಲ್ಲಿ ದುಪ್ಪಟ್ಟು: ವರದಿ

Similar News