ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮೇಘಾಲಯ ಬಿಜೆಪಿ ನಾಯಕ ಬರ್ನಾಡ್ ಮರಕ್‌ಗೆ ಜಾಮೀನು

Update: 2022-11-15 07:41 GMT

ಶಿಲ್ಲಾಂಗ್: ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಪ್ರಕರಣದಲ್ಲಿ ಬಿಜೆಪಿ ನಾಯಕ ಬರ್ನಾಡ್ ಎನ್.  ಮರಕ್ ಗೆ BJP leader Bernard Marak ಮೇಘಾಲಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಕೌನ್ಸಿಲ್‌ನ ಚುನಾಯಿತ ಸದಸ್ಯ ಹಾಗೂ  ರಾಜ್ಯ ಬಿಜೆಪಿ ಉಪಾಧ್ಯಕ್ಷನೂ ಆಗಿರುವ ಮರಕ್ ಈ ಹಿಂದೆ ಫಾರ್ಮ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಸಿರುವ ಹಾಗೂ ಕಟ್ಟಡದಿಂದ  ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿದ್ದ.

ಫಾರ್ಮ್‌ಹೌಸ್‌ಗೆ ಸಂಬಂಧಿಸಿದಂತೆ ಮರಕ್  ವಿರುದ್ಧ ಬಾಕಿ ಉಳಿದಿರುವ ಅಂತಿಮ ಪ್ರಕರಣದಲ್ಲಿ ಸೋಮವಾರ ಜಾಮೀನು ಆದೇಶವನ್ನು ಅಂಗೀಕರಿಸಿದ ನ್ಯಾಯಮೂರ್ತಿ ಡಬ್ಲ್ಯೂ ಡೀಂಗ್‌ಡೊ ಅವರ ಏಕ ಪೀಠವು, ಮಗುವಿನ ಮೇಲೆ ಮಾರಕ್ ನಡೆಸಿರುವ ಲೈಂಗಿಕ ದೌರ್ಜನ್ಯಕ್ಕೆ  ಯಾವುದೇ ನೇರ ಪುರಾವೆಗಳಿಲ್ಲ ಎಂದು ಹೇಳಿತು.

ಬಿಜೆಪಿ ನಾಯಕನಿಗೆ ದೇಶವನ್ನು ತೊರೆಯದಂತೆ ಅಥವಾ ಸಾಕ್ಷ್ಯವನ್ನು ಹಾಳುಮಾಡಲು ಪ್ರಯತ್ನಿಸದಂತೆ ನಿರ್ದೇಶಿಸಲಾಯಿತು. ಅಗತ್ಯವಿದ್ದಾಗ  ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಲಾಯಿತು.  ಜೊತೆಗೆ 30,000 ರೂ.ಗಳ ವೈಯಕ್ತಿಕ ಬಾಂಡ್ ಅನ್ನು ಅಂತಹ ಮೊತ್ತದ ಎರಡು ಶ್ಯೂರಿಟಿಗಳನ್ನು ಪಾವತಿಸಲು ಸೂಚಿಸಲಾಗಿದೆ.

Similar News