ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣ ಅರಣ್ಯ ಪ್ರದೇಶದಲ್ಲಿ ತಲೆಬುರುಡೆ, ಎಲುಬುಗಳು ಪತ್ತೆ

Update: 2022-11-21 15:32 GMT

ಹೊಸದಿಲ್ಲಿ, ನ. 21: ಶ್ರದ್ಧಾ ವಾಲ್ಕರ್(Shraddha Walker) ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ರವಿವಾರ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ತಲೆಬುರುಡೆಯ ಭಾಗ ಹಾಗೂ ಕೆಲವು ಎಲುಬುಗಳನ್ನು ಪತ್ತೆ ಮಾಡಿದ್ದಾರೆ. ದಿಲ್ಲಿಯ ಮೆಹ್ರೌಲಿ(Mehrauli) ಹಾಗೂ ಗುರ್ಗಾಂವ್‌(Gurgaon)ನ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ತಲೆ ಬುರುಡೆಯ ತುಂಡು ಹಾಗೂ ಎಲುಬು(A piece of skull and bone)ಗಳೆಂದು ಹೇಳಬಹುದಾದ ದೇಹದ ಇತರ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಈ ದೇಹದ ಭಾಗಗಳು ಮಾನವನದ್ದೇ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ತಾನು ಶ್ರದ್ಧಾಳ ತಲೆ ಹಾಗೂ ದೇಹದ ಇತರ ಭಾಗಗಳನ್ನು ಮೈದಾನ್‌ಗಾರಿ ಪ್ರದೇಶದಲ್ಲಿರುವ ಕೊಳಕ್ಕೆ ಎಸೆದಿದ್ದೇನೆ ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ರವಿವಾರ ಕೊಳದ ನೀರನ್ನು ಖಾಲಿ ಮಾಡಲು ಆರಂಭಿಸಿದ್ದಾರೆ.

‘‘ದೇಹದ ಕೆಲವು ಭಾಗಗಳನ್ನು ಇಲ್ಲಿ ಎಸೆಯಲಾಗಿದೆ ಎಂದು ನಾವು ಕೇಳಿದ್ದೇವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ. ಅವರು ಕೊಳದ ನೀರು ಖಾಲಿ ಮಾಡುತ್ತಿದ್ದಾರೆ’’ ಎಂದು ಸ್ಥಳೀಯ ನಿವಾಸಿಗಳ ಕಲ್ಯಾಣ ಸಂಘಟನೆಯ ಅಧ್ಯಕ್ಷ ಮಹಾವೀರ್ ಪ್ರಧಾನ್ (Mahavir Pradhan)ಅವರು ಹೇಳಿದ್ದಾರೆ.

Similar News