ಉಮ್ರಾನ್ ಮಲಿಕ್ ಬೌಲಿಂಗ್ ನನಗೆ ಇಷ್ಟವಾಯಿತು: ರವಿ ಶಾಸ್ತ್ರಿ

Update: 2022-11-30 18:24 GMT

ಹೊಸದಿಲ್ಲಿ, ನ.30: ನ್ಯೂಝಿಲ್ಯಾಂಡ್ ವಿರುದ್ಧ ಮಳೆ ಬಾಧಿತ ಏಕದಿನ ಸರಣಿಯಲ್ಲಿ ಭಾರತವು 0-1 ಅಂತರದಿಂದ ಸೋತಿದ್ದರೂ ಕೂಡ ಸಾಕಷ್ಟು ಧನಾತ್ಮಕ ಅಂಶ ಪಡೆದಿದೆ ಎಂದು ಮಾಜಿ ಕೋಚ್ ರವಿ ಶಾಸ್ತ್ರಿ ಬುಧವಾರ ಹೇಳಿದ್ದಾರೆ. ಯುವ ಆಟಗಾರ ಉಮ್ರಾನ್ ಮಲಿಕ್ ಅವರ ವೇಗದ ಬೌಲಿಂಗ್ ರವಿ ಶಾಸ್ತ್ರಿ ವಿಶೇಷವಾಗಿ ಪ್ರಭಾವಿತ ರಾಗಿದ್ದಾರೆ.

‘‘ಉಮ್ರಾನ್ ಬೌಲಿಂಗ್ ಮಾಡುವ ರೀತಿ ನನಗೆ ಇಷ್ಟವಾಗಿದೆ. ಅಲ್ಲಿ ಅವರ ಸಾಮರ್ಥ್ಯವಿದೆ. ಅವರು ಪರಿಶ್ರಮಪಟ್ಟರೆ ತುಂಬಾ ಒಳ್ಳೆಯದಾಗುತ್ತದೆ. ಈ ಏಕದಿನ ಸರಣಿಯಿಂದ ಬಹಳಷ್ಟು ಧನಾತ್ಮಕ ಅಂಶಗಳು ಲಭಿಸಿವೆ ಎನ್ನುವುದು ನನ್ನ ಅನಿಸಿಕೆ. ಕೆಲವು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಪ್ರತಿಭಾವಂತ ಆಟಗಾರ ಎಂದು ಶಾಸ್ತ್ರಿ ಹೇಳಿದ್ದಾರೆ.

ಇಂದು ಮಳೆಬಾಧಿತ ಪಂದ್ಯದಲ್ಲಿ ಪತನಗೊಂಡಿರುವ ನ್ಯೂಝಿಲ್ಯಾಂಡ್ನ ಏಕೈಕ ವಿಕೆಟ್ ಉಮ್ರಾನ್ ಮಲಿಕ್ ಪಾಲಾಗಿದೆ.

Similar News