ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಇಂದು ಆರಂಭ

Update: 2022-12-01 04:40 GMT

ಅಹಮದಾಬಾದ್: ಗುಜರಾತ್‌ ವಿಧಾನಸಭೆಗೆ  ಇಂದು ಮೊದಲ ಹಂತದಲ್ಲಿ 89 ಸ್ಥಾನಗಳಿಗೆ ಚುನಾವಣೆ ಆರಂಭವಾಗಿದ್ದು, ಬಿಜೆಪಿ ಸತತ ಏಳನೇ ಬಾರಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.

ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ  ಸಿಎಂ ಅರವಿಂದ ಕೇಜ್ರಿವಾಲ್ ಗುಜರಾತ್ ಮೊದಲ ಹಂತದ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸುವಂತೆ ಜನರನ್ನು ಕೋರಿದ್ದಾರೆ.

ಬಿಜೆಪಿ, ಆಪ್ ಹಾಗೂ  ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಗೆ ಗುಜರಾತ್ ಸಾಕ್ಷಿಯಾಗಲಿದೆ.

 ಮೇಲ್ನೋಟಕ್ಕೆ  ಕಾಂಗ್ರೆಸ್ ಅನ್ನು ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿರುವ ಆಮ್ ಆದ್ಮಿ ಪಕ್ಷ ಬಿಜೆಪಿಗೆ ಈ ಬಾರಿ  ದೊಡ್ಡ ಸವಾಲಾಗಿದೆ.

89 ಸ್ಥಾನಗಳು ಕಚ್ ಹಾಗೂ  ಸೌರಾಷ್ಟ್ರ ಪ್ರದೇಶದ 19 ಜಿಲ್ಲೆಗಳಲ್ಲಿ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಹರಡಿಕೊಂಡಿವೆ.

1995 ರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ, ಸಂಖ್ಯೆಗಳ ಕುಸಿತವನ್ನು ತಡೆಯುವುದು ನಿಜವಾದ ಸವಾಲು. ಪಕ್ಷದ ಸ್ಥಾನ  2002 ರಿಂದ ಕುಗ್ಗುತ್ತಿದೆ. 2018 ರ ಚುನಾವಣೆಯಲ್ಲಿ 137 ರಿಂದ 99 ಕ್ಕೆ ಇಳಿದಿತ್ತು.

ರಾಜ್ಯದ 182 ಸ್ಥಾನಗಳಲ್ಲಿ 140 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಕಾರ್ಯಾಚರಣೆಯನ್ನು ನಿಯಂತ್ರಿಸುತ್ತಿದ್ದಾರೆ. ಬಿಜೆಪಿ ಹೈವೋಲ್ಟೇಜ್ ಪ್ರಚಾರ ನಡೆಸಿದ್ದು, ಪ್ರಮುಖ ನಾಯಕರ ಜೊತೆ ರಾಜ್ಯದಲ್ಲಿ ಪ್ರಚಾರ ನಡೆಸಿದೆ.

Similar News