ನಮ್ಮ ಕುಟುಂಬದಲ್ಲಿನ ವಿಭಿನ್ನ ಸಿದ್ದಾಂತದಿಂದ ಸಮಸ್ಯೆಯಾಗದು: ರಿವಾಬಾ ಜಡೇಜಾ

Update: 2022-12-01 06:08 GMT

ಜಾಮ್‌ನಗರ: ತಮ್ಮ ಕುಟುಂಬದಲ್ಲಿನ ವ್ಯತಿರಿಕ್ತ ಸಿದ್ಧಾಂತಗಳಿಂದ ನನಗೆ  "ಯಾವುದೇ ಸಮಸ್ಯೆ" ಇದ್ದಂತೆ ಕಾಣುತ್ತಿಲ್ಲ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ Rivaba Jadeja, wife of cricketer Ravindra Jadeja ಅವರು ಹೇಳಿದ್ದಾರೆ.

"ಇದರಿಂದ  ನನಗೆ ಯಾವುದೇ ಕಷ್ಟವಿಲ್ಲ. ಒಂದೇ ಕುಟುಂಬದಲ್ಲಿ ವಿಭಿನ್ನ ಸಿದ್ಧಾಂತದ ಜನರು ಇರಬಹುದು" ಎಂದು ರಿವಾಬಾ ಜಡೇಜಾ ಸುದ್ದಿಗಾರರಿಗೆ ತಿಳಿಸಿದರು.

"ನನಗೆ ಜಾಮ್‌ನಗರದ ಜನರ ಮೇಲೆ ನಂಬಿಕೆ ಇದೆ, ನಾವು ಒಟ್ಟಾರೆ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಹಾಗೂ  ಈ ಬಾರಿಯೂ ಬಿಜೆಪಿ ಉತ್ತಮ ಅಂತರದಿಂದ ಗೆಲ್ಲುತ್ತದೆ’’ ಎಂದರು.

ಉತ್ತರ ಜಾಮ್‌ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ಗುರುವಾರ ಆರಂಭವಾದ ಮೊದಲ ಹಂತದ ಚುನಾವಣೆಯಲ್ಲಿ ರಾಜ್‌ಕೋಟ್‌ನಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

"ನಾನು ಕಾಂಗ್ರೆಸ್‌ನೊಂದಿಗೆ ಇದ್ದೇನೆ, ಪಕ್ಷದ ವಿಷಯವು ಕುಟುಂಬದ ವಿಷಯಕ್ಕಿಂತ ಭಿನ್ನವಾಗಿದೆ. ನಾವು ನಮ್ಮ ಪಕ್ಷದೊಂದಿಗೆ ವರ್ಷಗಳ ಕಾಲ ಇರಬೇಕು. ಇದು ಪಕ್ಷದ ವಿಷಯ, ಕೌಟುಂಬಿಕ ಸಮಸ್ಯೆ ಇಲ್ಲ ಎಂಬುದು ಅವರಿಗೆ ಗೊತ್ತಿದೆ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಮತ್ತು ಬಿಜೆಪಿಯ ರಿವಾಬಾ ಜಡೇಜಾ ಅವರ ಮಾವ ಅನಿರುದ್ದಸಿನ್ಹ ಜಡೇಜಾ ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ

ಕಾಂಗ್ರೆಸ್ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿರುವ ರಿವಾಬಾ ಜಡೇಜಾ ಅವರು 2019 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ವಾರದ ಆರಂಭದಲ್ಲಿ, ಅವರ ಮಾವ ಅನಿರುದ್ದಸಿನ್ಹ ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು, ಆ ವೀಡಿಯೊ  ವೈರಲ್ ಆಗಿದೆ. ರಿವಾಬಾರ ಅತ್ತಿಗೆ ನಯನಾಬಾ ಜಡೇಜಾ, ಕಾಂಗ್ರೆಸ್ ನಾಯಕಿಯಾಗಿದ್ದು, ಅವರು ಕೂಡ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.

Similar News