ಜಲಶಕ್ತಿ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್, ತನಿಖೆ ಆರಂಭ

Update: 2022-12-01 06:32 GMT

ಹೊಸದಿಲ್ಲಿ: ಗುರುವಾರ ಅಪರಿಚಿತ ಸೈಬರ್ ವಂಚಕರು ಜಲ ಶಕ್ತಿ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಅನ್ನು ಸ್ವಲ್ಪ ಸಮಯ ಹ್ಯಾಕ್ ಮಾಡಿದ್ದಾರೆ. ಕಳೆದ ವಾರ ದಿಲ್ಲಿಯ ಏಮ್ಸ್ ಸರ್ವರ್ ಅನ್ನು ಹ್ಯಾಕ್ ಮಾಡಿದ ನಂತರ ಸರಕಾರಿ ಸೈಟ್‌ನಲ್ಲಿ ಮೇಲೆ ಆಗಿರುವ ಎರಡನೇ ಪ್ರಮುಖ ಸೈಬರ್ ದಾಳಿ ಇದಾಗಿದೆ. ಈ ಕುರಿತು ತನಿಖೆ ಆರಂಭಿಸಲಾಗಿದೆ.

ಮಂಗಳವಾರ ಮುಂಜಾನೆ ಹ್ಯಾಕಿಂಗ್ ನಡೆದಿದೆ ಎಂದು ನಂಬಲಾಗಿದ್ದು,ಪೇಜ್ ನಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಿದೆ.

 ಸೂಯಿ ವಾಲೆಟ್ ಅನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ಮೊದಲು ಜಲ ಶಕ್ತಿ ಸಚಿವಾಲಯದ ಖಾತೆಯಿಂದ ಬೆಳಿಗ್ಗೆ 5:38 ಕ್ಕೆ ಪೋಸ್ಟ್ ಮಾಡಲಾಗಿದೆ.

ಖಾತೆಯ ಪ್ರೊಫೈಲ್ ಚಿತ್ರವನ್ನು ಭಾರತೀಯ ಧ್ವಜದ ಬದಲಿಗೆ ಸುಯಿ ಲೋಗೋಕ್ಕೆ ಬದಲಾಯಿಸಲಾಗಿತ್ತು

Similar News