ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ನಟಿ ಸ್ವರಾ ಭಾಸ್ಕರ್

Update: 2022-12-01 07:39 GMT

ಉಜ್ಜಯಿನಿ: ನಟಿ ಸ್ವರಾ ಭಾಸ್ಕರ್ Actor Swara Bhasker ಅವರು ಗುರುವಾರ  ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ರಾಹುಲ್ ಗಾಂಧಿಯವರೊಂದಿಗೆ ಸ್ವರ  ಭಾಸ್ಕರ್ ಅವರ ಚಿತ್ರವನ್ನು ಹಂಚಿಕೊಂಡಿದೆ.

"ಇಂದು ಪ್ರಸಿದ್ಧ ನಟಿ ಸ್ವರ ಭಾಸ್ಕರ್ BharatJodoYatra ಭಾಗವಾಗಿದ್ದಾರೆ. ಸಮಾಜದ ಪ್ರತಿಯೊಂದು ವರ್ಗದ ಉಪಸ್ಥಿತಿಯು ಈ ಯಾತ್ರೆಯನ್ನು ಯಶಸ್ವಿಗೊಳಿಸಿದೆ" ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

ಸ್ವರಾ ಭಾಸ್ಕರ್ ಅವರು ಕಾಂಗ್ರೆಸ್ ಪಕ್ಷದ ಪೋಸ್ಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ, ಪೂಜಾ ಭಟ್, ರಿಯಾ ಸೇನ್, ಸುಶಾಂತ್ ಸಿಂಗ್, ಮೋನಾ ಅಂಬೇಗಾಂವ್ಕರ್, ರಶ್ಮಿ ದೇಸಾಯಿ, ಹಾಗೂ  ಆಕಾಂಕ್ಷಾ ಪುರಿ ಮುಂತಾದ ಚಿತ್ರರಂಗದ ಪ್ರಮುಖರು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಯಾತ್ರೆಯು  ಒಂದು ದಿನದ ವಿರಾಮದ ನಂತರ ಗುರುವಾರ ಬೆಳಿಗ್ಗೆ ಉಜ್ಜಯಿನಿಯಿಂದ ಪುನರಾರಂಭವಾಯಿತು. ಮಧ್ಯಪ್ರದೇಶದ ಕೊನೆಯ ಜಿಲ್ಲೆಯಾದ ಅಗರ್ ಮಾಲ್ವಾಕ್ಕೆ ತೆರಳಿತು. ಯಾತ್ರೆಯು ಪಶ್ಚಿಮ ಮಧ್ಯಪ್ರದೇಶದ ರಾಜಕೀಯವಾಗಿ ನಿರ್ಣಾಯಕ ಮಾಲ್ವಾ-ನಿಮಾರ್ ಪ್ರದೇಶದಲ್ಲಿ 380 ಕಿ.ಮೀ ದೂರವನ್ನು 12 ದಿನಗಳಲ್ಲಿ ಕ್ರಮಿಸಲು ನಿರ್ಧರಿಸಲಾಗಿದೆ.

Similar News