ಗುಜರಾತ್: ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದ ಪ್ರಧಾನಿ ಮೋದಿ

Update: 2022-12-05 04:24 GMT

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ಬೆಳಗ್ಗೆ ಆರಂಭವಾಗಿದ್ದು, ಜನರು ಮತದಾನ ಮಾಡುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ Prime Minister Narendra Modiತಮ್ಮ ಮತ ಚಲಾಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಆಗಮಿಸುವಂತೆ ಚುನಾವಣಾ ಆಯೋಗ ಜನರಿಗೆ ಮನವಿ ಮಾಡಿದೆ.

ಡಿ.1ರಂದು ನಡೆದ ಗುಜರಾತ್ ಚುನಾವಣೆಯ ಮೊದಲ ಹಂತದಲ್ಲಿ  ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿತ್ತು

ಗೃಹ ಸಚಿವ ಅಮಿತ್ ಶಾ ಕೂಡ ಅಹಮದಾಬಾದ್‌ನಲ್ಲಿ ಮತದಾನ ಮಾಡಲಿದ್ದಾರೆ.

ಎರಡನೇ ಹಂತವು ಮಧ್ಯ ಹಾಗೂ  ಉತ್ತರ ಗುಜರಾತ್ ಜಿಲ್ಲೆಗಳಾದ್ಯಂತ 93 ಸ್ಥಾನಗಳನ್ನು ಒಳಗೊಂಡಿದೆ. ಸುಮಾರು 833 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಎರಡನೇ ಹಂತದ ಮತದಾನಕ್ಕೆ 2.5 ಕೋಟಿಗೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ

1990 ರಿಂದ ಚುನಾವಣೆಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿಗೆ ಅಹಮದಾಬಾದ್‌ನ ಎಲ್ಲಾ 16 ನಗರ ಸ್ಥಾನಗಳು ನಿರ್ಣಾಯಕವಾಗಿವೆ.

ಅಹಮದಾಬಾದ್‌ನಲ್ಲಿ ಕಾಂಗ್ರೆಸ್  ಕಳೆದ ಚುನಾವಣೆಯಲ್ಲಿ ತನ್ನ ಸಂಖ್ಯೆಯನ್ನು2ರಿಂದ  ನಾಲ್ಕು ಸ್ಥಾನಗಳಿಗೆ ಹೆಚ್ಚಿಸಿಕೊಂಡಿತ್ತು. ಈ ಬಾರಿ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಲಾ 16 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಹೋರಾಟ ಕುತೂಹಲಕಾರಿಯಾಗಿದೆ.

Similar News