×
Ad

11 ಅಪರಾಧಿಗಳ ಜೈಲು ಶಿಕ್ಷೆ ರದ್ದತಿ ಪ್ರಶ್ನಿಸಿದ ಬಿಲ್ಕಿಸ್ ಬಾನು ಅರ್ಜಿ ಡಿ.13ರಂದು ವಿಚಾರಣೆಗೆ

Update: 2022-12-10 23:45 IST

ಹೊಸದಿಲ್ಲಿ,ಡಿ.10:  2002ರಲ್ಲಿ ನಡೆದ ಗುಜರಾತ್ ಗಲಭೆಯ ಸಂದರ್ಭದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿ, ತನ್ನ ಕುಟುಂಬದ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸಲ್ಲಿಸಿದ್ದ ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಮಂಗಳವಾರ (ಡಿ.13) ನಡೆಸಲಿದೆ.

ಪ್ರಕರಣದ ನ್ಯಾಯಾಂಗ ವಿಚಾರಣೆಯು ಮಹಾರಾಷ್ಟ್ರದಲ್ಲಿ ನಡೆದಿರುವ  ಹೊರತಾಗಿಯೂ,   ಜೈಲು ಶಿಕ್ಷ ರದ್ದತಿ ಕೋರಿ ಅಪರಾಧಿಗಳು ಸಲ್ಲಿಸಿದ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಗುಜರಾತ್ ಸರಕಾರಕ್ಕಿದೆಯೆಂಬ ಸುಪ್ರೀಂಕೋರ್ಟ್‌ನ ಮೇ 2022ರ ಆದೇಶವನ್ನು ಮರುಪರಿಶೀಲಿಸಬೇಕೆಂದು ಬಲ್ಕಿಸ್ ಅರ್ಜಿಯಲ್ಲಿ ಕೋರಿದ್ದರು.

‘‘ಜೈಲು ಶಿಕ್ಷೆ ರದ್ದತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ   ಆಲಿಕೆಯನ್ನು ಮಂಗಳವಾರಕ್ಕೆ ನಿಗದಿಪಡಿಸಲಾಗಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಬೆಲಾ ಎಂ. ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ ಅಲಿಕೆ ನಡೆಸಲಿದೆ ಎಂದು ಕಾನೂನು ಸುದ್ದಿಜಾಲ ತಾಣ ಲೈವ್ ಲಾ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ತೀರ್ಪಿನ ಮರುಪರಾಮರ್ಶೆ ಕೋರಿ  ಬಿಲ್ಕಿಸ್ ಬಾನು ಅವರು ಒಂದು ವಾರದ ಹಿಂದೆ  ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಿಲ್ಕಿಸ್ ಪರವಾಗಿ ನ್ಯಾಯವಾದಿ ಶೋಭಾ ಗುಪ್ತಾ ಅವರು ವಾದಿಸಲಿದ್ದಾರೆ.

Similar News