ಗುಜರಾತ್: ಬಿಜೆಪಿ ಸೇರ್ಪಡೆ ಸುದ್ದಿ ನಿರಾಕರಿಸಿದ ಆಪ್ ಶಾಸಕ ಭೂಪತ್ ಭಯಾನಿ

Update: 2022-12-11 11:27 GMT

ಅಹಮದಾಬಾದ್: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಕೆಲವು ಶಾಸಕರು ಸತತ ಏಳನೇ ಅವಧಿಗೆ ರಾಜ್ಯದಲ್ಲಿ ಸರಕಾರ ರಚಿಸಲಿರುವ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುನಾಗಢ್ ಜಿಲ್ಲೆಯ ವಿಸಾವದರ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಎಎಪಿ ಶಾಸಕ ಭೂಪತ್ ಭಯಾನಿ ಅವರು  ಪಕ್ಷವನ್ನು ಬದಲಾಯಿಸಿರುವ ವರದಿಯನ್ನು ನಿರಾಕರಿಸಿದ್ದಾರೆ.

ಗುಜರಾತ್ ರಾಜಕೀಯದಲ್ಲಿ ಭಾರೀ ಅಲೆ ಎಬ್ಬಿಸಲು ಬಯಸಿದ್ದ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ   ಪಕ್ಷವು ಕಾಂಗ್ರೆಸ್ ಮತಗಳನ್ನು ಕಸಿದುಕೊಂಡರೂ ಕೇವಲ ಐದು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತ್ತು.

Similar News