11 ಅಪರಾಧಿಗಳ ಬಿಡುಗಡೆ ವಿರುದ್ಧ ಬಿಲ್ಕಿಸ್ ಬಾನು ಸಲ್ಲಿಸಿದ್ದ ಒಂದು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2022-12-17 07:54 GMT

ಹೊಸದಿಲ್ಲಿ: 2002ರ ಕೋಮು ಹಿಂಸಾಚಾರದ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿ ತನ್ನ ಕುಟುಂಬದ ಹಲವು ಸದಸ್ಯರನ್ನು ಕೊಂದ 11 ಅಪರಾಧಿಗಳ ಬಿಡುಗಡೆ  ವಿರುದ್ಧ  ಗುಜರಾತ್ ಗಲಭೆ ಸಂತ್ರಸ್ತೆ  ಬಿಲ್ಕಿಸ್ ಬಾನು Bilkis Bano ಸಲ್ಲಿಸಿದ್ದ ಎರಡು ಅರ್ಜಿಗಳಲ್ಲಿ ಪೈಕಿ ಒಂದನ್ನು ಸುಪ್ರೀಂ ಕೋರ್ಟ್  Supreme Court ಶನಿವಾರ ವಜಾಗೊಳಿಸಿದೆ ಎಂದು NDTV ವರದಿ ಮಾಡಿದೆ.

ವಜಾಗೊಂಡ ಅರ್ಜಿಯಲ್ಲಿ ಅಪರಾಧಿಗಳ ಬಿಡುಗಡೆ ಮನವಿಯನ್ನು ಪರಿಗಣಿಸಲು ಗುಜರಾತ್ ಸರಕಾರಕ್ಕೆ ತಿಳಿಸಿದ ತನ್ನ ಮೇ 2022 ರ ಆದೇಶವನ್ನು ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೇಳಲಾಗಿದೆ. ಬಿಡುಗಡೆಯ ಆಧಾರವನ್ನು ಪ್ರಶ್ನಿಸುವ ಬಾನು ಅವರ ಇನ್ನೊಂದು ಅರ್ಜಿ ಮೇಲೆ  ಈ ನಿರ್ಧಾರದಿಂದ ತಕ್ಷಣವೇ ಪರಿಣಾಮ ಬೀರುವುದಿಲ್ಲ. ವಿವರವಾದ ಆದೇಶ ಇನ್ನೂ ಲಭ್ಯವಾಗಿಲ್ಲ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ  11 ಅಪರಾಧಿಗಳು ಆಗಸ್ಟ್ 15 ರಂದು ಜೈಲಿನಿಂದ ಹೊರಬಂದಿದ್ದರು. ಗೃಹ ಸಚಿವಾಲಯದ ಅನುಮೋದನೆಯೊಂದಿಗೆ ಗುಜರಾತ್‌ನ ಬಿಜೆಪಿ ಸರಕಾರವು 1992 ರ ನೀತಿಯ ಅಡಿಯಲ್ಲಿ ಉತ್ತಮ ನಡವಳಿಕೆ ಯ ಕಾರಣದಿಂದಾಗಿ ಎಲ್ಲರನ್ನೂ ಅವಧಿಗಿಂತ ಮುಂಚಿತವಾಗಿ ಬಿಡುಗಡೆ ಮಾಡಿತ್ತು.

ನೆರೆಯ ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆದಿರುವುದರಿಂದ ನಿರ್ಧಾರ ಕೈಗೊಳ್ಳಲು ಗುಜರಾತ್ ಸೂಕ್ತ ರಾಜ್ಯವಲ್ಲ ಎಂದು ಬಿಲ್ಕಿಸ್ ಬಾನು ವಾದಿಸಿದ್ದಾರೆ. 2004ರಲ್ಲಿ ಗುಜರಾತ್‌ನಲ್ಲಿ ನ್ಯಾಯಸಮ್ಮತ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಬಾನು  ಹೇಳಿದ ಬಳಿಕ ಸುಪ್ರೀಂ ಕೋರ್ಟ್‌ನ ಸೂಚನೆ ಮೇರೆಗೆ ವಿಚಾರಣೆಯನ್ನು ಮುಂಬೈಗೆ ಸ್ಥಳಾಂತರಿಸಲಾಗಿತ್ತು.

Similar News