3 ಕೋಟಿ ರೈಲ್ವೆ ಬಳಕೆದಾರರ ಡಾಟಾ ಮಾರಾಟಕ್ಕಿಟ್ಟ ಹ್ಯಾಕರ್‌ಗಳು!

ರೈಲ್ವೆ ಸಚಿವಾಲಯ ಹೇಳಿದ್ದೇನು?

Update: 2022-12-29 10:58 GMT

ಹೊಸದಿಲ್ಲಿ: ಮೂರು ಕೋಟಿ ಭಾರತೀಯ ರೈಲ್ವೆ ಬಳಕೆದಾರರ ಮಾಹಿತಿ ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿದೆ ಎಂದು ಹ್ಯಾಕರ್‌ಗಳ ವೇದಿಕೆಯೊಂದು ಹೇಳಿದೆ. ಆದರೆ ತನ್ನ ಯಾವುದೇ ಸಿಸ್ಟಂ ಅಥವಾ ಸಂಸ್ಥೆಗಳ ಮೇಲೆ ಇಂಥ ದತ್ತಾಂಶ ಉಲ್ಲಂಘನೆಯಾಗಿಲ್ಲ ಎಂದು ರೈಲ್ವೆ ಸಚಿವಾಲಯ ಹೇಳಿಕೊಂಡಿದೆ. ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ದತ್ತಾಂಶ ಉಲ್ಲಂಘನೆಯಾಗಿದೆ ಎಂಬ ಹೇಳಿಕೆಗಳನ್ನು ರೈಲ್ವೆ ನಿರಾಕರಿಸಿದೆ.

ಆದಾಗ್ಯೂ ಎಲ್ಲ ವ್ಯವಹಾರ ಪಾಲುದಾರರು ತಮ್ಮ ಕಡೆಯಿಂದ ಯಾವುದೇ ಡಾಟಾ ಸೋರಿಕೆಯಾಗಿದೆಯೇ ಎಂಬುದನ್ನು ತಕ್ಷಣ ಪರಿಶೀಲಿಸಿ, ಇದರ ಫಲಿತಾಂಶಗಳ ಬಗ್ಗೆ ಮತ್ತು ಸರಪಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

"ಸ್ಯಾಂಪಲ್ ಡಾಟಾ ವಿಶ್ಲೇಷಣೆ ವೇಳೆ, ಕೀ ಪ್ಯಾಟರ್ನ್, ಐಆರ್‌ಸಿಟಿಸಿ ಹಿಸ್ಟರಿ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್‌ಫೇಸ್‌ಗೆ ತಾಳೆಯಾಗಿಲ್ಲ. ಐಆರ್‌ಸಿಟಿಸಿ ಸರ್ವರ್‌ಗಳಿಂದ ಶಂಕಿತ ಡಾಟಾ ಉಲ್ಲಂಘನೆಯಾಗಿಲ್ಲ" ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಭಾರತೀಯ ರೈಲ್ವೆಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಸಂಭಾವ್ಯ ಡಾಟಾ ಉಲ್ಲಂಘನೆ ಮಾದರಿಯನ್ನು ರೈಲ್ವೆ ಮಂಡಳಿ ಹಂಚಿಕೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಬಾಳಸಂಗಾತಿ ಹೇಗಿರಬೇಕು ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದು ಹೀಗೆ..

Similar News