ಭಾರತ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್

Update: 2023-01-10 17:36 GMT

ಗುವಾಹಟಿ: ಭಾರತದ ವೇಗದ ಬೌಲರ್ ಉಮ್ರಾನ್ ಮಲಿಕ್ (Umran Malik) ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗಂಟೆಗೆ 156 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ತನ್ನದೇ ದಾಖಲೆ ಉತ್ತಮಪಡಿಸಿಕೊಂಡರು. ಮಾತ್ರವಲ್ಲ ಭಾರತ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿ ಹೊಸ ದಾಖಲೆ ನಿರ್ಮಿಸಿದರು.

ಈ ಹಿಂದೆ ಶ್ರೀಲಂಕಾ ವಿರುದ್ಧದ ಮೊದಲ ಟ್ವೆಂಟಿ-20ಯಲ್ಲಿ ಗಂಟೆಗೆ 155 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿ ಶನಕ ವಿಕೆಟ್ ಪಡೆದಿದ್ದ 23ರ ಹರೆಯದ ಮಲಿಕ್ ಅವರು ಬುಮ್ರಾ ದಾಖಲೆಯನ್ನು (153.36)ಮುರಿದು ಭಾರತದ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದರು. ಇದೀಗ ತನ್ನ ಹಿಂದಿನ ದಾಖಲೆಯನ್ನು (155 ಕಿ.ಮೀ.) ಉತ್ತಮಪಡಿಸಿಕೊಂಡರು. ಮುಹಮ್ಮದ್ ಶಮಿ(153.3) ಹಾಗೂ ನವದೀಪ್ ಸೈನಿ(152.85)ಪಟ್ಟಿಯಲ್ಲಿ 3ನೇ ಹಾಗೂ 4ನೇ ಸ್ಥಾನದಲ್ಲಿದ್ದಾರೆ.

ಮಲಿಕ್ ಇಂದಿನ ಪಂದ್ಯದ 14ನೇ ಓವರ್‌ನ 4ನೇ ಎಸೆತವನ್ನು ಗಂಟೆಗೆ 156 ಕಿ.ಮೀ.ವೇಗದಲ್ಲಿ ಬೌಲಿಂಗ್ ಮಾಡಿದರು. ಉಮ್ರಾನ್ ಇದೀಗ ಟ್ವೆಂಟಿ-20, ಐಪಿಎಲ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ ಬೌಲಿಂಗ್ ಮಾಡಿದ ಸಾಧನೆ ಮಾಡಿದ್ದಾರೆ.

ಏಕದಿನದಲ್ಲಿ ಗಂಟೆಗೆ 156 ಕಿ.ಮೀ., ಟ್ವೆಂಟಿ-20ಯಲ್ಲಿ ಗಂಟೆಗೆ 155 ಕಿ.ಮೀ. ಹಾಗೂ ಐಪಿಎಲ್‌ನಲ್ಲಿ ಗಂಟೆಗೆ 157 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ.
 

ಇದನ್ನೂ ಓದಿ:  ಏಕದಿನ ಪಂದ್ಯ: ಶತಕ ಸಿಡಿಸಿ ಸಚಿನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

Similar News