ಮೂರು ವರ್ಷಗಳ ನಂತರ ಮೊದಲ ಏಕದಿನ ಶತಕ ಬಾರಿಸಿದ ರೋಹಿತ್‌ ಶರ್ಮ

Update: 2023-01-24 10:39 GMT

ಇಂದೋರ್‌ : ಭಾರತ ಮತ್ತು ನ್ಯೂಝಿಲೆಂಡ್‌ ನಡುವೆ ಇಂದು ಇಂದೋರ್‌ನಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಕಳೆದ ಮೂರು ವರ್ಷಗಳ ಅವಧಿಯ ತಮ್ಮ ಮೊದಲನೇ ಶತಕವನ್ನು ಟೀಮ್‌ ಇಂಡಿಯಾ ಕಪ್ತಾನ ರೋಹಿತ್‌ ಶರ್ಮ (Rohit Sharma) ಸಿಡಿಸಿದ್ದಾರೆ.

ತಮ್ಮ ಶತಕಕ್ಕಾಗಿ ರೋಹಿತ್‌ 9 ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿ ತಾವು ಫಾರ್ಮ್‌ನಲ್ಲಿರುವುದನ್ನು ಸಾಬೀತುಪಡಿಸಿದ್ದಾರೆ. ಅರ್ಧಶತಕವನ್ನು ಕೇವಲ 41 ಬಾಲ್‌ಗಳಲ್ಲಿ ತಲುಪಿದ ರೋಹಿತ್‌, ಮುಂದಿನ 52 ರನ್‌ಗಳನ್ನು 42 ಬಾಲ್‌ ಎದುರಿಸಿ ಪಡೆದರು.

ಈ ಹಿಂದೆ ರೋಹಿತ್‌ ಜನವರಿ 2020 ರಲ್ಲಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಶತಕ ಬಾರಿಸಿದ್ದರು.

ಆರಂಭಿಕ ದಾಂಡಿಗರಾಗಿ ರೋಹಿತ್‌ ಅವರು ಶುಭಮನ್‌ ಗಿಲ್‌ ಜೊತೆಗೆ 212 ರನ್ ಗಳಿಸಿದರು. ಆದರೆ ಶತಕ ಸಿಡಿಸಿದ ಬೆನ್ನಿಗೇ ರೋಹಿತ್‌ ಔಟ್‌ ಆದರು.

Similar News