×
Ad

ಕ್ರೌಡ್‌ಫಂಡಿಂಗ್ ದುರ್ಬಳಕೆ ಆರೋಪ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ಜಾಮೀನು ನಿರಾಕರಣೆ

Update: 2023-02-02 22:43 IST

ಹೊಸದಿಲ್ಲಿ,ಫೆ.2: ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರ್ಬಳಕೆ ಮಾಡಿದ್ದಾರೆಂಬ ಆರೋಪಗಳಿಗೆ ಸಂಬಂಧಿಸಿ ಬಂಧಿತರಾಗಿರುವ ತೃಣಮೂಲ ಕಾಂಗ್ರೆಸ್ ನ ವಕ್ತಾರ ಸಾಕೇತ್ ಗೋಖಲೆ(Saket Gokhale) ಅವರು ಜಾಮೀನುಬಿಡುಗಡೆ ಕೋರಿ ಸಲ್ಲಿಸಿದ ಅರ್ಜಿಯನ್ನು ಗುಜರಾತ್ ಹೈಕೋರ್ಟ್(High Court of Gujarat) ಗುರುವಾರ ತಿರಸ್ಕರಿಸಿದೆ. 

ಗೋಖಲೆ ಅವರನ್ನು ಅಹ್ಮದಾಬಾದ್ ನ ಸೈಬರ್ ಅಪರಾಧ ದಳವು ಡಿಸೆಂಬರ್ 29ರಂದು ಬಂಧಿಸಿತ್ತು. ‘‘ನಮ್ಮ ಪ್ರಜಾಪ್ರಭುತ್ವ’’ ಎಂಬ ಕ್ರೌಡ್ಫಂಡಿಂಗ್ ವೇದಿಕೆಯ ಮೂಲಕ 1700ಕ್ಕೂ ಅಧಿಕ ಮಂದಿಯಿಂದ 72 ಲಕ್ಷ ರೂ.ಗಳನ್ನು ಗೋಖಲೆ ಸಂಗ್ರಹಿಸಿದ್ದರು ಹಾಗೂ ಈ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣದ ಆಲಿಕೆ ನಡೆಸಿದ ನ್ಯಾಯಮೂರ್ತಿ ಸಮೀರ್ ಜೆ. ದವೆ ಅವರು ಸಾಕೇತ್ ಗೋಖಲೆ ಅವರು ಕ್ರೌಡ್ ಫಂಡಿಂಗ್ ನಿಂದ ಸಂಗ್ರಹವಾದ ಹಣವನ್ನು ವೈಯಕ್ತಿಕ ಕಾರಣಗಳಿಗೆ ಬಳಸಿಕೊಂಡು ಹಣ ವರ್ಗಾವಣೆಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆಯೆಂದು ಅಭಿಪ್ರಾಯಿಸಿದರು ಹಾಗೂ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಎಂದು ಲೈವ್ ಲಾ ವರದಿ ಮಾಡಿದೆ.

ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹಣವನ್ನು ಸಂಗ್ರಹಿಸಲಾಗಿತ್ತು ಹಾಗೂ ಬಹುತೇಕ ಹಣವರ್ಗಾವಣೆಗಳು ಆನ್ಲೈನ್ ಮೂಲಕ ನಡೆದಿದ್ದವು ಎಂದು ನ್ಯಾಯಾಲಯ ತಿಳಿಸಿತು.

ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ವೈಯಕ್ತಿಕವಾಗಿ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಗೋಖಲೆ ಅವರನ್ನು ಕಪ್ಪುಹಣ ಬಿಳುಪು ತಡೆ ಕಾಯ್ದೆಯ ವಿವಿಧ ಸೆಕ್ಷನ್ ಳಡಿ ಬಂಧಿಸಿತ್ತು. ಅವರಿಗೆ ನಗರದ ನ್ಯಾಯಾಲಯವುಜನವರಿ 31ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಧಿಸಿತ್ತು. ತನ್ನ ಬಂಧನದ ವಿರುದ್ಧ ಜಾಮೀನುಬಿಡುಗಡೆ ಕೋರಿ ಸಾಕೇತ್ ಗೋಖಲೆ ಅವರು ಗುಜರಾತ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

Similar News