×
Ad

ವ್ಯಾಪಕ ಟೀಕೆಯ ಬಳಿಕ ಪ್ರೇಮಿಗಳ ದಿನದಂದು 'ಹಸುವನ್ನು ಆಲಂಗಿಸುವ' ಸಲಹೆಯನ್ನು ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ

Update: 2023-02-10 18:15 IST

ಹೊಸದಿಲ್ಲಿ: ಪ್ರೇಮಿಗಳ ದಿನದಂದು ಜನರು ಹಸುವನ್ನು ಆಲಂಗಿಸಲು ಸಲಹೆ ನೀಡಿ ನಗೆ ಪಾಟಲಿಗೀಡಾಗಿದ್ದ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ತನ್ನ ಸಲಹೆಯನ್ನು ಹಿಂಪಡೆದುಕೊಂಡಿದೆ.

ಹಸುವನ್ನು ಆಲಂಗಿಸುವ ಮಂಡಳಿಯ ಸಲಹೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವ್ಯಂಗ್ಯ ವ್ಯಕ್ತವಾದ ಬೆನ್ನಲ್ಲೇ ಸಲಹೆಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ಕೆ ದತ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಣಿ ಕಲ್ಯಾಣ ಮಂಡಳಿಯು ಬಿಜೆಪಿಯ ಪರಶೋತ್ತಮ್ ರೂಪಲಾ ಅವರ ನೇತೃತ್ವದ ಪಶುಸಂಗೋಪನೆ ಸಚಿವಾಲಯದ ಅಡಿಯಲ್ಲಿ ಬರುತ್ತದೆ.

"ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು ಹಸು ತಬ್ಬುವ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ" ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Similar News