ತೇಜಸ್ವಿ ಸೂರ್ಯ ಆಕಸ್ಮಿಕವಾಗಿ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದಾರೆ: ಸಂಸತ್ತಿಗೆ ಕೇಂದ್ರದ ಉತ್ತರ

Update: 2023-02-10 14:56 GMT

ಹೊಸದಿಲ್ಲಿ : ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಳೆದ ತಿಂಗಳು ಆಕಸ್ಮಿಕವಾಗಿ ಇಂಡಿಗೋ ವಿಮಾನದ ತುರ್ತು ಬಾಗಿಲನ್ನು ತೆರೆದಿದ್ದರು ಮತ್ತು ವಿಮಾನಯಾನ ಸಂಸ್ಥೆಯು ಯಾವುದೇ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. 

ಕಳೆದ ವರ್ಷ ಡಿಸೆಂಬರ್ 10 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನಿಸಿದ ಟಿಎಂಸಿ ಸಂಸದೆ ಮಾಲಾ ರಾಯ್‌, ಚೆನ್ನೈನಲ್ಲಿ ವಿಮಾನದ ತುರ್ತು ದ್ವಾರವನ್ನು ಅಕ್ರಮವಾಗಿ ತೆರೆದ ಪ್ರಯಾಣಿಕರನ್ನು ವಿಮಾನಯಾನ ನಿಯಂತ್ರಕ ನಿರ್ದೇಶನಾಲಯ (ಡಿಜಿಸಿಎ) ಮೂಲಕ ಸರ್ಕಾರ ಗುರುತಿಸಿದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿಕೆ ಸಿಂಗ್, “"ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ ಸಲ್ಲಿಸಿದ ವರದಿಯ ಪ್ರಕಾರ, ಘಟನೆಯಲ್ಲಿ ಆರೋಪಿಸಲಾದ ಪ್ರಯಾಣಿಕರ ಹೆಸರು ತೇಜಸ್ವಿ ಸೂರ್ಯ. ಅವರು ಡಿಸೆಂಬರ್ 10, 2022 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ 6E-7339 (ಚೆನ್ನೈನಿಂದ ತಿರುಚಿರಾಪಳ್ಳಿ) ವಿಮಾನವನ್ನು ಹತ್ತಿದರು. ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಸ್ಪಷ್ಟಪಡಿಸಿದಂತೆ ತುರ್ತು ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿದೆ. ಇದು ಉದ್ದೇಶಪೂರ್ವಕ ಕ್ರಮವಲ್ಲ ಮತ್ತು, ಪ್ರಯಾಣಿಕರು ಯಾವುದೇ ನಿಯಮವನ್ನು ಉಲ್ಲಂಘಿಸಿರುವುದನ್ನು ಇಂಟರ್ ಗ್ಲೋಬ್ ಏವಿಯೇಷನ್ ಕಂಡುಕೊಂಡಿಲ್ಲ,” ಎಂದು ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾರವಾರ ಸಿಂಗಾಪುರಕ್ಕೆ ಹೋಗಿದೆ ಎಂದ ನಳಿನ್ ಕುಮಾರ್ ಕಟೀಲ್ ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು ಹೀಗೆ...

Similar News