ಮತದಾನದ ದಿನ ಮತ ಕೋರಿ ಟ್ವೀಟ್: ಬಿಜೆಪಿ, ಕಾಂಗ್ರೆಸ್‌ಗೆ ಇಸಿ ನೋಟಿಸ್

Update: 2023-02-16 16:47 GMT

ಹೊಸದಿಲ್ಲಿ,ಫೆ.16: ತ್ರಿಪುರಾ ವಿಧಾನಸಭಾ ಚುನಾವಣೆಗಾಗಿ ಗುರುವಾರ ಮತದಾನ ನಡೆಯುತ್ತಿರುವಾಗಲೇ ಮತಗಳನ್ನು ಕೋರಿ ಟ್ವೀಟಿಸಿದ್ದಕ್ಕಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯ ಘಟಕಗಳಿಗೆ ಹಾಗೂ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಲೀಪ ಸೈಕಿಯಾ(Dilip Saikia) ಅವರಿಗೆ ನೋಟಿಸ್  ಗಳನ್ನು ಹೊರಡಿಸಿದ್ದಾರೆ. 

ಮಂಗಳವಾರ ಸಂಜೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ ಮತ್ತು 48 ಗಂಟೆಗಳ ಈ ಅವಧಿಯಲ್ಲಿ ಟ್ವೀಟಿಸಿರುವುದು ಚುನಾವಣಾ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ (EC)ವು ತಿಳಿಸಿದೆ.

ತ್ರಿಪುರಾದಲ್ಲಿ ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿತ್ತು.

ತಪ್ಪನ್ನು ತಿದ್ದಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಿದೆ. ಉಲ್ಲಂಘನೆ ಕುರಿತು ತಮ್ಮ ನಿಲುವುಗಳನ್ನು ಶುಕ್ರವಾರ ಸಂಜೆ ಐದು ಗಂಟೆಯೊಳಗೆ ವಿವರಿಸುವಂತೆ ಸೂಚಿಸಲಾಗಿದೆ ಎಂದೂ ಇಸಿ ತಿಳಿಸಿದೆ.

Similar News