ದ್ವಿತೀಯ ಟೆಸ್ಟ್: ಆಸ್ಟ್ರೇಲಿಯ 263 ರನ್ ಗೆ ಆಲೌಟ್
ಉಸ್ಮಾನ್ ಖ್ವಾಜಾ, ಹ್ಯಾಂಡ್ಸ್ ಕಾಂಬ್ ಅರ್ಧಶತಕ, ಶಮಿಗೆ 4 ವಿಕೆಟ್
Update: 2023-02-17 16:47 IST
ಹೊಸದಿಲ್ಲಿ, ಫೆ.17: ಮುಹಮ್ಮದ್ ಶಮಿ(4-60) ನೇತೃತ್ವದ ಬೌಲರ್ ಗಳ ಅಮೋಘ ಬೌಲಿಂಗ್ ನೆರವಿನಿಂದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 78.4 ಓವರ್ ಗಳಲ್ಲಿ 263 ರನ್ ಗೆ ಆಲೌಟ್ ಮಾಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯದ ಪರ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ(81 ರನ್, 125 ಎಸೆತ), ಮಧ್ಯಮ ಕ್ರಮಾಂಕದ ಆಟಗಾರ ಪೀಟರ್ ಹ್ಯಾಂಡ್ಸ್ ಕಾಂಬ್(72 ರನ್, 142 ಎಸೆತ)ಅರ್ಧಶತಕ ಕೊಡುಗೆ ನೀಡಿದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಶಮಿ 4 ವಿಕೆಟ್ ಗೊಂಚಲು ಪಡೆದರೆ, ಆರ್. ಅಶ್ವಿನ್(3-57) ಹಾಗೂ ರವೀಂದ್ರ ಜಡೇಜ (3-68) ತಲಾ 3 ವಿಕೆಟ್ ಗಳನ್ನು ಉರುಳಿಸಿದರು.