×
Ad

ತನು ಯೋಗ ಭೂಮಿಯ 50ನೇ ಪ್ರದರ್ಶನ

Update: 2023-02-21 19:47 IST

ಉಡುಪಿ: ಉಡುಪಿಯ ಯೋಗಬಾಲೆ, ಹಲವು ವಿಶ್ವದಾಖಲೆಗಳ ಸಾಧಕಿ ಪಿತ್ರೋಡಿಯ ತನುಶ್ರೀ ಅವರ ತನು ಯೋಗ ಭೂಮಿಯ 50ನೇ ಪ್ರದರ್ಶನ ಇಂದಿರಾನಗರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಾಧಕರಾದ ರಾಜ್ ಕುಮಾರ್ ಬೆಹ್ರೈನ್, ನಿವೃತ್ತ ಶಿಕ್ಷಕ ವಿಶ್ವನಾಥ ಬಾಯಿರಿ, ಪ್ರಾಧ್ಯಾಪಕ  ದೇವೀ ಪ್ರಸಾದ್ ಅದಮಾರು, ದಿನೇಶ್ ಭಟ್, ಸೋಮಶೇಖರ್, ರಾಕೇಶ್ ಕಟಪಾಡಿ, ಪ್ರಜ್ಞಾ ಕುರ್ಕಾಲು ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಸಿಸಿಲೀಸ್ ಶಾಲೆಯ ಪ್ರೀತಿ ಕ್ರಾಸ್ತಾ, ರಾಮಕೃಷ್ಣ ಕೊಡಂಚ, ಶ್ರೀಧರ್ ದೇವಾಡಿಗ, ಶಿಕ್ಷಕರಾದ ಗಿರೀಶ್ ಎ.ನಾಯ್ಕ್ ಗಾಯತ್ರಿ, ಕೃಷ್ಣ ಕುಲಾಲ್, ವಿಜಯ್  ಕುಮಾರ್, ಸುರಭಿ ರತನ್ ಮೊದಲಾದವರು ಉಪಸ್ಥಿತರಿದ್ದರು.

Similar News