×
Ad

ತನ್ನ ಗೆಳತಿಗೆ ಸಂದೇಶ ಕಳುಹಿಸಿದ್ದ ಗೆಳಯನ ಶಿರಚ್ಚೇದ ಮಾಡಿ ಪೊಲೀಸರಿಗೆ ಶರಣಾದ ಯುವಕ

Update: 2023-02-26 10:42 IST

ಹೈದರಾಬಾದ್: ತನ್ನ ಗೆಳತಿಗೆ ಮೆಸೇಜ್   ಹಾಗೂ  ಕರೆ ಮಾಡಿದ್ದಕ್ಕಾಗಿ 22 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನನ್ನು ಭೀಕರವಾಗಿ ಕೊಲೆಗೈದಿದ್ದಾನೆ. ಮೆಸೇಜ್   ಕಳುಹಿಸಿದಾತ ಹುಡುಗಿಯೊಂದಿಗೆ ಮೊದಲು ಸಂಬಂಧ ಹೊಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತನ್ನ ಸ್ನೇಹಿತನ ಶಿರಚ್ಛೇದ ಮಾಡಿದ್ದಲ್ಲದೆ, ಆತನ ಹೃದಯ ಹಾಗೂ  ಖಾಸಗಿ ಭಾಗಗಳನ್ನು ಹೊರ ತೆಗೆದು, ಬೆರಳುಗಳನ್ನು ಕತ್ತರಿಸಿ ನಂತರ  ಶರಣಾಗಲು ಪೊಲೀಸ್ ಠಾಣೆಗೆ ತೆರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ನವೀನ್ ಹಾಗೂ  ಹರಿಹರ ಕೃಷ್ಣ ಅವರು ದಿಲ್‌ಸುಖ್‌ನಗರದ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಒಟ್ಟಿಗೆ ಮುಗಿಸಿದ್ದಾರೆ.

ಘಟನೆಯ ಕೇಂದ್ರಬಿಂದುವಾಗಿರುವ ಬಾಲಕಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು.

ಇಬ್ಬರು ಹುಡುಗಿಯನ್ನು ಪ್ರೀತಿಸುತ್ತಿದ್ದರು, ಆದರೆ ನವೀನ್ ಮೊದಲು ಅವಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದ ಹಾಗೂ ಹುಡುಗಿಯು ನವೀನ್ ನನ್ನು ಒಪ್ಪಿಕೊಂಡಿದ್ದಳು, ಆದರೂ ಒಂದೆರಡು ವರ್ಷಗಳ ನಂತರ ಇಬ್ಬರೂ ಬೇರೆಯಾದರು. ನಂತರ ಹುಡುಗಿ ಹರಿಹರ ಕೃಷ್ಣನೊಂದಿಗೆ ಸಂಬಂಧವನ್ನು ಬೆಳೆಸಿದ್ದಳು ಪೊಲೀಸರು ಹೇಳಿದರು.

ತಮ್ಮ ಸಂಬಂಧ ಮುರಿದುಬಿದ್ದಿದ್ದರೂ, ನವೀನ್ ಹುಡುಗಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಕೆಗೆ ಸಂದೇಶ ಹಾಗೂ  ಕರೆಗಳನ್ನು ಮಾಡುತ್ತಿದ್ದ, ಇದು ಕೃಷ್ಣನನ್ನು ತೀವ್ರವಾಗಿ ಅಸಮಾಧಾನಗೊಳಿಸಿತ್ತು. ಆರೋಪಿ  ಕೃಷ್ಣ ಸ್ನೇಹಿತನನ್ನು ಮುಗಿಸಲು  ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಕಾಯುತ್ತಿದ್ದ.

ಫೆಬ್ರವರಿ 17 ರಂದು ಇಬ್ಬರು ವಿಪರೀತ  ಮದ್ಯ ಸೇವಿಸಿದ ನಂತರ ಜಗಳ ಮಾಡಿಕೊಂಡಿದ್ದರು. ಕೃಷ್ಣ,  ನವೀನ್‌ನನ್ನು ಹತ್ಯೆಗೈದಿದ್ದ. ಆರೋಪಿ ಕೃಷ್ಣ, ನವೀನನ ತಲೆಯನ್ನು ಬೇರ್ಪಡಿಸಿ ಅವನ ಖಾಸಗಿ ಭಾಗಗಳು, ಹೃದಯ ಹೊರ ತೆಗೆದಿದ್ದಾನೆ, ಬೆರಳನ್ನು ಕತ್ತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Similar News