×
Ad

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವುದಕ್ಕೂ ಮೊದಲು ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

Update: 2023-03-01 13:49 IST

ಹೊಸದಿಲ್ಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುವುದಕ್ಕೂ ಮೊದಲು ಭಾರತ್ ಜೋಡೊ ಯಾತ್ರೆಯ ನಂತರ ಮೊದಲ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಕೂದಲು ಹಾಗೂ  ಗಡ್ಡವನ್ನು ಟ್ರಿಮ್ ಮಾಡಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ಒಂದು ವಾರದ ಪ್ರವಾಸಕ್ಕಾಗಿ ಮಂಗಳವಾರ ಲಂಡನ್ ಗೆ ಬಂದಿಳಿದ ಕಾಂಗ್ರೆಸ್ ನಾಯಕ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸ ನೀಡಲಿದ್ದಾರೆ.
ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್ ನ (ಕೇಂಬ್ರಿಡ್ಜ್ ಜೆಬಿಎಸ್) ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು 'Learning to Listen in the 21st Century' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಕೂದಲು ಹಾಗೂ ಗಡ್ಡವನ್ನು ಕತ್ತರಿಸಿಕೊಂಡು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿರುವ  ಕಾಂಗ್ರೆಸ್ ಸಂಸದ ರಾಹುಲ್ ಅವರ ಚಿತ್ರಗಳನ್ನು ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಕೆಲವರು #NewLook ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದಾರೆ.

52 ವರ್ಷ ವಯಸ್ಸಿನ ರಾಹುಲ್ 12-ರಾಜ್ಯಗಳಿಗೆ  ನಾಲ್ಕು ತಿಂಗಳುಗಳಲ್ಲಿ ಸುಮಾರು 4,000 ಕಿ.ಮೀ. ಭಾರತ್ ಜೋಡೊ ಯಾತ್ರೆಯ ಕಾಲ್ನಡಿಗೆ ವೇಳೆ ತಮ್ಮ ಕೂದಲು ಹಾಗೂ  ಗಡ್ಡಕ್ಕೆ ಕತ್ತರಿ ಹಾಕದೇ ಬೆಳೆಯಲು ಬಿಟ್ಟಿದ್ದರು. ಅವರ ಗಡ್ಡದ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ಛತ್ತೀಸ್ಗಢದ ರಾಯ್ಪುರದಲ್ಲಿ ಮೂರು ದಿನಗಳ ಕಾಂಗ್ರೆಸ್ ಅಧಿವೇಶನ ಮುಗಿದ  ನಂತರ ರಾಹುಲ್ ಗಾಂಧಿ ಬ್ರಿಟನ್ ಗೆ ತೆರಳಿದ್ದಾರೆ.

ಇದನ್ನೂ ಓದಿ: ಇಂಟರ್ನೆಟ್ ಸೇವೆ ಸ್ಥಗಿತ ಆದೇಶ: ಸತತ‌ ಐದನೇ ವರ್ಷವೂ ಭಾರತ ಅಗ್ರ ಸ್ಥಾನದಲ್ಲಿ !

Similar News