×
Ad

ಮಹಿಳಾ ಪ್ರೀಮಿಯರ್ ಲೀಗ್: ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 60 ರನ್ ಜಯ

Update: 2023-03-05 18:58 IST

ಮುಂಬೈ, ಮಾ.5: ಆರಂಭಿಕ ಆಟಗಾರ್ತಿಯರಾದ ಶೆಫಾಲಿ ಶರ್ಮಾ(84 ರನ್, 45 ಎಸೆತ) ಹಾಗೂ ಮೆಗ್ ಲ್ಯಾನಿಂಗ್(72 ರನ್, 43 ಎಸೆತ) ಭರ್ಜರಿ ಅರ್ಧಶತಕಗಳು ಹಾಗೂ ಟಾರಾ ನೊರಿಸ್(5-29) ಐದು ವಿಕೆಟ್ ಗೊಂಚಲು ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡವನ್ನು 60 ರನ್‌ನಿಂದ ಮಣಿಸಿದೆ.

ರವಿವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲುಪಿಎಲ್)ನಲ್ಲಿ ಟಾಸ್ ಜಯಿಸಿದ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿದೆ. ಆರ್‌ಸಿಬಿಗೆ ಗೆಲ್ಲಲು ಕಠಿಣ ಗುರಿ ನೀಡಿತು.

224 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಮಹಿಳಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 163 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಆರ್‌ಸಿಬಿ ಪರ ನಾಯಕಿ ಸ್ಮತಿ ಮಂಧಾನ(35 ರನ್, 23 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.

ಹೀಥರ್ ನೈಟ್(34 ರನ್, 21 ಎಸೆತ), ಎಲ್ಲಿಸ್ ಪೆರ್ರಿ(31 ರನ್, 19 ಎಸೆತ) ಹಾಗೂ ಮೆಗಾನ್ ಶುಟ್(ಔಟಾಗದೆ 30 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಡೆಲ್ಲಿಯ ಪರ ನೊರಿಸ್(5-29)ಯಶಸ್ವಿ ಪ್ರದರ್ಶನ ನೀಡಿದರು. ಅಲಿಸ್ ಕಾಪ್ಸೆ(2-10) ಎರಡು ವಿಕೆಟ್ ಪಡೆದರು.

Similar News