ಪ್ರಧಾನಿ ಮೋದಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆಗೆ ಕಾಂಗ್ರೆಸ್ ನಿರ್ಧಾರ

ಸೋನಿಯಾ, ರಾಹುಲ್ ವಿರುದ್ಧ ಮಾನಹಾನಿಕರ ಹೇಳಿಕೆ ಆರೋಪ

Update: 2023-03-17 17:13 GMT

ಹೊಸದಿಲ್ಲಿ,ಫೆ.28: ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಅವರ ಪುತ್ರ, ಸಂಸದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ, ಅಸಭ್ಯ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಲು ಅವಕಾಶ ನೀಡಬೇಕೆಂದು ಕೋರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಾರ್ಚ್ 17ರಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಶುಕ್ರವಾರ ಪತ್ರಬರೆದಿದ್ದಾರೆ.

ಸಂಸತ್ ನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಕುರಿತಾಗಿ ಫೆಬ್ರವರಿ 9ರಂದು ಪ್ರಧಾನಿಯವರು ಮಾಡಿದ ಭಾಷಣದ ಅಂಶಗಳನ್ನು ವೇಣುಗೋಪಾಲ್ ಅವರು ರಾಜ್ಯಸಭಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ತನ್ನ ಭಾಷಣಗಳಲ್ಲಿ ತಾನು ಉಲ್ಲೇಖಿಸುತ್ತಿಲ್ಲವೆಂಬ ಕಾಂಗ್ರೆಸ್ ನ ಆರೋಪಗಳಿಗೆ ವಂದನಾ ನಿರ್ಣಯದ ವೇಳೆ ಉತ್ತರಿಸಿದ್ದ ಮೋದಿ‘ನೆಹರೂ ಅವರ ಯಾವುದೇ ವಂಶಸ್ಥರು ಅವರ ಉಪನಾಮವನ್ನು ಬಳಸುತ್ತಿಲ್ಲ’ವೆಂದು ಕಟಕಿಯಾಡಿದ್ದರು. ತನ್ನ ಭಾಷಣದಲ್ಲಿ ಪ್ರಧಾನಿಯವರು ಆದಾನಿ-ಹಿಂಡನ್ಬರ್ಗ್ ವಿವಾದದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿರಲಿಲ್ಲ. ಆದರೆ ತನ್ನ ವಿರುದ್ಧ ಪ್ರತಿಪಕ್ಷಗಳು ಕೆಸರನ್ನು ಎರಚುವುದರಿಂದ, ಕಮಲವು(ಬಿಜೆಪಿಯ ಚುನಾವಣಾ ಚಿಹ್ನೆ)ವು ಚೆನ್ನಾಗಿ ಬೆಳೆಯಲು ನೆರವಾಗಲಿದೆ ಎಂದು ಹೇಳಿದ್ದರು. ಮೋದಿ ಅವರ ಭಾಷಣದ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರು ಸದನದ ಮುಂಭಾಗಕ್ಕೆ ಬಂದು ಅದಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗಿದೆ ಎಂದು ರಾಹುಲ್ ಗಾಂಧಿ ಅವರು ಲಂಡನ್ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ವಿರುದ್ಧ ಬಿಜೆಪಿ ತಾಳಿರುವ ಅಕ್ರಮ ಣಕಾರಿ ನಿಲುವಿಗೆ ಎದಿರೇಟು ನೀಡುವ ಸ್ಪಷ್ಟ ಪ್ರಯತ್ನ ಇದಾಗಿದೆ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.

ಲಂಡನ್ ನಲ್ಲಿ ನೀಡಿದ ವಿವಾದಾತ್ಮ ಹೇಳಿಕೆಗಾಗಿ ರಾಹುಲ್ ಕ್ಷಾಮೆಯಾಚಿಸಬೇಕೆಂಬ ತನ್ನ ಬೇಡಿಕೆಯಿಂದ ಹಿಂದೆ ಬಿಜೆಪಿ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಈ ಮಧ್ಯೆ ಶುಕ್ರವಾರವೂ ಸಂಸತ್ಕಲಾಪಗಳು ಅಸ್ತವ್ಯಸ್ತಗೊಂಡವು,

ಈ ಮಧ್ಯೆ ಅದಾನಿ ಗ್ರೂಪ್ ನ ವಿವಾದಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಪ್ರತಿಪಕ್ಷಗಳು ಪಟ್ಟುಹಿಡಿದಿದ್ದು, ಗುರುವಾರ ಹಲವಾರು ವಿಪಕ್ಷ ಸದಸ್ಯರು ಸಂಸತ್ನ ಆವರಣದಲ್ಲಿಇ ಮಾನವ ಸರಪಣಿ ನಿರ್ಮಿಸಿದರು.

Similar News