ಮಧ್ಯಪ್ರದೇಶದ ಪಟ್ಟಣಕ್ಕೆ ಮರುನಾಮಕರಣ: ನಸ್ರುಲ್‌ಗಂಜ್ ಇನ್ನು ಮುಂದೆ....

Update: 2023-04-02 16:50 GMT

ಭೋಪಾಲ್, ಎ.2: ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡಿರುವ ಮಧ್ಯಪ್ರದೇಶ ಸರಕಾರವು ರವಿವಾರ ನಸ್ರುಲ್‌ಗಂಜ್ ಪಟ್ಟಣದ ಹೆಸರನ್ನು ಭೇರುಂಡ ಎಂಬುದಾಗಿ ಬದಲಾಯಿಸಿದೆ. 

ನಸ್ರುಲ್ಗಂಜ್ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿನಿಧಿಸುತ್ತಿರುವ ಬುಧಿನಿ ವಿಧಾನಸಭಾ ಕ್ಷೇತ್ರದಲ್ಲಿರುವ  ಪಟ್ಟಣವಾಗಿದ್ದು, ಸೆಹೋರ್ ಜಿಲ್ಲೆಯಲ್ಲಿದೆ.
ನಸ್ರುಲ್ಗಂಜ್ಗೆ ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಧ್ಯಪ್ರದೇಶ ಸರಕಾರವು ಕಳೆದ ವರ್ಷ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು. ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ದೊರೆತ ಬಳಿಕ ರಾಜ್ಯ ಸರಕಾರವು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ.

ಫೆಬ್ರವರಿ 2022ರಲ್ಲಿ ಮಧ್ಯಪ್ರದೇಶ ಸರಕಾರವು ಹೊಶಂಗ್ಬಾದ್ ಜಿಲ್ಲೆಯ ಹೆಸರನ್ನು  ನರ್ಮದಾಪುರಮ್ ಎಂಬುದಾಗಿ ಬದಲಾಯಿಸಿತ್ತು ಹಾಗೂಬಬಾಯಿ ಪಟ್ಟಣದ ಹೆಸರನ್ನು ಮಖಾನ್ ನಗರವೆಂಬುದಾಗಿ ಹೆಸರಿಸಿತ್ತು  ಬಬಾಯಿ ನಗರವು ಪ್ರಸಿದ್ಧ ಕವಿ ಮಖಾನ್ಲಾಲ್ ಚತುರ್ವೇದಿ ಅವರ ಜನ್ಮಸ್ಥಳವಾಗಿದೆ.

2021ರ ನವೆಂಬರ್ನಲ್ಲಿ ಭೋಪಾಲ್ನ ಹಬೀಬ್ಗಂಜ್ ರೈಲು ನಿಲ್ದಾಣವನ್ನು ಮರುನಾಮಕರಣಗೊಳಿಸಲಾಗಿದ್ದು, ಬುಡಕಟ್ಟು ರಾಣಿ ಕಮಲಾಪತಿ ಅವರ ಹೆಸರನ್ನಿಡಲಾಗಿತ್ತು.

Similar News