×
Ad

ಐಪಿಎಲ್: ಹೈದರಾಬಾದ್‌ಗೆ ಸೋಲುಣಿಸಿದ ಲಕ್ನೊ

Update: 2023-04-07 22:52 IST

 ಲಕ್ನೊ, ಎ.7: ನಾಯಕ ಕೆ.ಎಲ್.ರಾಹುಲ್(35 ರನ್, 31 ಎಸೆತ), ಕೃನಾಲ್ ಪಾಂಡ್ಯ(34 ರನ್, 23 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಐಪಿಎಲ್‌ನ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 122 ರನ್ ಗುರಿ ಬೆನ್ನಟ್ಟಿದ ಲಕ್ನೊ ತಂಡ 16 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಕೈಲ್ ಮೇಯರ್ಸ್(13 ರನ್)ಹಾಗೂ ರಾಹುಲ್ ಮೊದಲ ವಿಕೆಟಿಗೆ 35 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಮೇಯರ್ಸ್ ಹಾಗೂ ದೀಪಕ್ ಹೂಡಾ(7 ರನ್)ಬೆನ್ನುಬೆನ್ನಿಗೆ ಔಟಾದರು. ಆಗ ಕೃನಾಲ್ ಪಾಂಡ್ಯ ಹಾಗೂ ರಾಹುಲ್ 3ನೇ ವಿಕೆಟಿಗೆ 55 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಸ್ಟೋನಿಸ್(ಔಟಾಗದೆ 10) ಹಾಗೂ ನಿಕೊಲಸ್(ಔಟಾಗದೆ 11)ಔಟಾಗದೆ ಉಳಿದರು. ಹೈದರಾಬಾದ್ ಪರ ಆದಿಲ್ ರಶೀದ್(2-23) ಯಶಸ್ವಿ ಬೌಲರ್ ಎನಿಸಿಕೊಂಡರು. ಭುವನೇಶ್ವರ ಕುಮಾರ್(1-19),ಫಾರೂಕಿ(1-13) ಹಾಗೂ ಉಮ್ರಾನ್ ಮಲಿಕ್(1-22)ತಲಾ ಒಂದು ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೃನಾಲ್ ಪಾಂಡ್ಯ(3-18)ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 121 ರನ್ ಗಳಿಸಲಷ್ಟೇ ಶಕ್ತವಾಗಿದೆ.
 
 

Similar News