×
Ad

IPL: ಮುಂಬೈ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 7 ವಿಕೆಟ್ ಜಯ

Update: 2023-04-08 23:15 IST

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನ 12ನೇ ಪಂದ್ಯದಲ್ಲಿ ಚೆನ್ನೈ ತಂಡವು ಏಳು ವಿಕೆಟ್‌ ಗಳಿಂದ ಜಯ ಸಾಧಿಸಿದೆ. 

ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ತಂಡ ಮೊದಲು ಬ್ಯಾಟಿಂಗ್‌ ನಡೆಸಿ, ಇಪ್ಪತ್ತು ಓವರ್‌ ಗಳಲ್ಲಿ 157 ರನ್‌ ಗಳನ್ನು ಪೇರಿಸಿದ್ದರು. ಇಶನ್‌ ಕಿಶನ್‌ 32 ಮತ್ತು ಟಿಮ್‌ ಡೇವಿಡ್‌ 31 ರನ್‌ ಗಳನ್ನು ಬಾರಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರರು ಉತ್ತಮ ಪ್ರದರ್ಶನ ತೋರಲಿಲ್ಲ. ಬೌಲಿಂಗ್‌ ನಲ್ಲಿ ಚೆನ್ನೈ ತಂಡದ ರವೀಂದ್ರ ಜಡೇಜಾ ಮೂರು ವಿಕೆಟ್‌ ಗಳನ್ನು ಪಡೆದು ಮಿಂಚಿದರು.

ಬಳಿಕ ಬ್ಯಾಟಿಂಗ್‌ ಮಾಡಿದ ಚೆನ್ನೈ ತಂಡದ ಪರ ಅಜಿಂಕ್ಯ ರಹಾನೆ ಕೇವಲ 27 ಎಸೆತಗಳಲ್ಲಿ ಮೂರು ಸಿಕ್ಸರ್‌ ಗಳ ಸಹಿತ 61 ರನ್‌ ಸಿಡಿಸಿದರು. ರಿತುರಾಜ್‌ ಗಾಯಕ್ವಾಡ್‌ 40 ರನ್‌ ಗಳಿಸಿ ಮಿಂಚಿದರು. 

Similar News