×
Ad

ಐಪಿಎಲ್: ಗುಜರಾತ್ ಗೆಲುವಿಗೆ 154 ರನ್ ಗುರಿ ನೀಡಿದ ಪಂಜಾಬ್ ಕಿಂಗ್ಸ್

Update: 2023-04-13 21:32 IST

ಮೊಹಾಲಿ, ಎ.13: ಮ್ಯಾಥ್ಯೂ ಶಾರ್ಟ್(36 ರನ್, 24 ಎಸೆತ), ಜಿತೇಶ್ ಶರ್ಮಾ(25 ರನ್, 23 ಎಸೆತ), ಸ್ಯಾಮ್ ಕರನ್( 22 ರನ್, 22 ಎಸೆತ)ಹಾಗೂ ಶಾರೂಖ್ ಖಾನ್(22 ರನ್,9 ಎಸೆತ)ಸಾಂದರ್ಭಿಕ ಬ್ಯಾಟಿಂಗ್ ಸಹಾಯದಿಂದ ಪಂಜಾಬ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 18ನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿದೆ.
 
ಗುರುವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ಇನಿಂಗ್ಸ್‌ನ 2ನೇ ಎಸೆತದಲ್ಲೇ ಪ್ರಭ್‌ಸಿಮ್ರನ್ ಸಿಂಗ್(0)ವಿಕೆಟನ್ನು ಕಳೆದುಕೊಂಡಿತು. ಹಿರಿಯ ವೇಗಿ ಮುಹಮ್ಮದ್ ಶಮಿ(1-44) ಆರಂಭದಲ್ಲೇ ಪಂಜಾಬ್‌ಗೆ ಶಾಕ್ ನೀಡಿದರು.

ನಾಯಕ ಶಿಖರ್ ಧವನ್(8 ರನ್)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ರಾಜಪಕ್ಸ ಹಾಗೂ ಜಿತೇಶ್ ಶರ್ಮಾ 4ನೇ ವಿಕೆಟಿಗೆ 37 ರನ್ ಜೊತೆಯಾಟ ನಡೆಸಿ ಇನಿಂಗ್ಸ್ ರಿಪೇರಿಗೆ ಯತ್ನಿಸಿದರು. ಇದು ಪಂಜಾಬ್ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ರನ್ ಜೊತೆಯಾಟವಾಗಿದೆ.

ಗುಜರಾತ್ ಪರ ಮೋಹಿತ್ ಶರ್ಮಾ(2-18) ಯಶಸ್ವಿ ಬೌಲರ್ ಎನಿಸಿಕೊಂಡರು.
 

Similar News