×
Ad

ದಿಲ್ಲಿ ಮೆಟ್ರೋ ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಯುವಕನ ಬಂಧನ

Update: 2023-04-15 12:09 IST

ಹೊಸದಿಲ್ಲಿ: ದಿಲ್ಲಿ ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿ ಎಪ್ರಿಲ್ 4 ರಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 26 ವರ್ಷದ ಯುವಕನನ್ನು ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಆರೋಪಿ ರಾಜೇಶ್ ಕುಮಾರ್ ದಕ್ಷಿಣ ದಿಲ್ಲಿಯ ಜಸೋಲಾ ಮೆಟ್ರೋ ಸ್ಟೇಷನ್‌ನ ಲಿಫ್ಟ್‌ನಲ್ಲಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿ, ಮಹಿಳೆಯನ್ನು ಸ್ಪರ್ಶಿಸಿದ್ದಾನೆ ಎಂದು ವರದಿಯಾಗಿದೆ.

ಭದ್ರತಾ ಕ್ಯಾಮರಾ ದೃಶ್ಯಾವಳಿ ಹಾಗೂ  ಸ್ಥಳೀಯ ಗುಪ್ತಚರ ಸಹಾಯದಿಂದ ರಾಜೇಶ್ ನನ್ನುಸೆರೆ ಹಿಡಿಯಲಾಗಿದೆ.

ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ಮಹಿಳೆ ಆತನ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ರಾಜೇಶ್ ಮೆಟ್ರೋ ರೈಲು ಹತ್ತದೆ ಓಡಿ ಹೋಗಿದ್ದಾನೆ.

ದಿಲ್ಲಿ ಮೆಟ್ರೋ ಪೊಲೀಸರು ಕಿರುಕುಳಕ್ಕೆ ಸಂಬಂಧಿಸಿದ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Similar News