ಮತ್ತೆ RCB ನಾಯಕನಾಗಿ ಮರಳಿದ ವಿರಾಟ್ ಕೊಹ್ಲಿ

Update: 2023-04-20 12:34 GMT

ಮೊಹಾಲಿ, ಎ.20: ವಿರಾಟ್ ಕೊಹ್ಲಿ 2021ರ ನಂತರ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆರ್‌ಸಿಬಿಯ ಓರ್ವ ಇಂಪ್ಯಾಕ್ಟ್ ಆಟಗಾರರಾಗಿರುವ ಖಾಯಂ ನಾಯಕ ಎಫ್ ಡು ಪ್ಲೆಸಿಸ್ ಬದಲಿಗೆ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

ಗಾಯದ ಸಮಸ್ಯೆಯ ಕಾರಣಕ್ಕೆ ಪ್ಲೆಸಿಸ್ ಮೈದಾನಕ್ಕೆ ಇಳಿಯುವುದಿಲ್ಲ. ಆದರೆ ಅವರು ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಲಿದ್ದಾರೆ. ಇನಿಂಗ್ಸ್ ವಿರಾಮದ ನಂತರ ಅವರ ಬದಲಿಗೆ ವೇಗದ ಬೌಲರ್ ವೈಶಾಕ್ ವಿಜಯಕುಮಾರ್ ಆಡಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.
 
ಐಪಿಎಲ್ ಮೊದಲ ಆವೃತ್ತಿ ಆರಂಭವಾದ 2008ರಿಂದ ಕೊಹ್ಲಿ ಅವರು ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. 2013ರಲ್ಲಿ ಅವರು ಆರ್‌ಸಿಬಿಯ ಖಾಯಂ ನಾಯಕನಾಗಿದ್ದರು. ಕೊಹ್ಲಿ 140 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ನಾಯಕನಾಗಿ ಮುನ್ನಡೆಸಿದ್ದು, ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 64ರಲ್ಲಿ ಜಯ ಹಾಗೂ 69ರಲ್ಲಿ ಸೋಲನುಭವಿಸಿದೆ. ಈ ತನಕ ಐಪಿಎಲ್ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ.

Similar News