ಐಪಿಎಲ್, ಡಬ್ಲುಟಿಸಿ ಫೈನಲ್‌ನಿಂದ ಕೆ.ಎಲ್. ರಾಹುಲ್ ಔಟ್

Update: 2023-05-05 11:16 GMT

ಹೊಸದಿಲ್ಲಿ, ಮೇ 5: ಭಾರತದ ಅಗ್ರ ಸರದಿಯ ಬ್ಯಾಟರ್ ಕೆ.ಎಲ್. ರಾಹುಲ್(KL Rahul) ಮುಂಬರುವ ಜೂನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿದಿದ್ದು, ಈ ಬೆಳವಣಿಗೆಯು ಟೀಮ್ ಇಂಡಿಯಾಕ್ಕೆ ತೀವ್ರ ಹಿನ್ನಡೆವುಂಟು ಮಾಡಿದೆ.

ಮೇ 1ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಹುಲ್ ತೊಡೆನೋವಿಗೆ ಒಳಗಾಗಿದ್ದು, ಈಗ ನಡೆಯುತ್ತಿರುವ ಐಪಿಎಲ್‌ನ ಇನ್ನುಳಿದಿರುವ ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ.

ರಾಹುಲ್ ಅವರು ವೈದ್ಯಕೀಯ ತಂಡದ ಸಲಹೆಯ ಮೇರೆಗೆ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ರಾಹುಲ್ ಲಕ್ನೊ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದು, ಗಾಯದ ಸಮಸ್ಯೆಯ ಕಾರಣಕ್ಕೆ ಅನಿರ್ದಿಷ್ಟಾವಧಿ ತನಕ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

ಡಬ್ಲುಟಿಸಿ ಫೈನಲ್ ಪಂದ್ಯ ಲಂಡನ್‌ನ ಓವಲ್‌ನಲ್ಲಿ ಜೂನ್ 7ರಿಂದ ಆರಂಭವಾಗಲಿದೆ.
 

Similar News