ಸಾತ್ವಿಕತೆ ಹೆಚ್ಚಿಸಲು ಆಧ್ಯಾತ್ಮಿಕ ದಾರಿಯಲ್ಲಿ ಮುನ್ನಡೆರಿ: ಪೇಜಾವರ ಶ್ರೀ
ಉಡುಪಿ, ಮೇ 14: ಹಿಂದೂ ಧರ್ಮದಲ್ಲಿ ಉಪನಯನ ಸಂಸ್ಕಾರಕ್ಕೆೆ ಬಹಳ ಪ್ರಾಶಸ್ತ್ಯ. ಜೀವನದಲ್ಲಿ ಸಾತ್ವಿಕತೆ ಯನ್ನು ಹೆಚ್ಚಿಸಿಕೊಳ್ಳಲು ಜಪಾನುಷ್ಠಾನದಂತಹ ಆಧ್ಯಾತ್ಮಿಕ ದಾರಿಯಲ್ಲಿ ಮುನ್ನಡೆಯಬೇಕು. ಇದಕ್ಕೆ ಉಪನಯನ ಸಂಸ್ಕಾರ ಸಹಕಾರಿ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕಡಿಯಾಳಿ ದೇವಸ್ಥಾನದ ಶರ್ವಾಣಿ ಮಂಟಪದಲ್ಲಿ ದೇವಸ್ಥಾನದ ಜೀರ್ಣೋ ದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿಯವರ ಪುತ್ರ ರಚಿತ್ ಕಿಣಿಯ ಉಪನಯನ ಸಂಸ್ಕಾರದ ಜತೆ 19 ವಟುಗಳಿಗೆ ನಡೆದ ಸಾಮೂಹಿಕ ಬ್ರಹ್ಮೋೋಪದೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ನೂತನ ವಟುಗಳನ್ನು ಹರಸಿದರು. ಹಿರಿಯ ವಿದ್ವಾಂಸ ಡಾ.ಸೋಂದಾ ಭಾಸ್ಕರ ಭಟ್ ಮುಖ್ಯ ಉಪನ್ಯಾಸ ನೀಡಿದರು. ಮಂಗಳ ನಿಧಿ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಹಿರಿಯರಾದ ಅಲೆವೂರು ಸಂಜೀವ ನಾಯಕ್ ನೆರವೇರಿಸಿದರು. ಅಧ್ಯಕ್ಷತೆ ಯನ್ನು ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ರವಿರಾಜ ಆಚಾರ್ಯ ವಹಿಸಿದ್ದರು. ವೇಮೂ ರಾಜೇಂದ್ರ ಭಟ್ ಉಪಸ್ಥಿತರಿದ್ದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕೆ.ರಘುಪತಿ ಭಟ್, ಮುನಿಯಾಲು ಉದಯಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ದಾ.ಮ.ರವೀಂದ್ರ ಮೊದಲಾದವರು ಶುಭ ಹಾರೈಸಿದರು.
ಪ್ರಾಯೋಜಕ ಕೆ.ರಾಘವೇಂದ್ರ ಕಿಣಿ ಸ್ವಾಗತಿಸಿದರು. ಕೆ.ಸಂತೋಷ್ ಕಿಣಿ ಕಾರ್ಯಕ್ರಮ ನಿರ್ವಹಿಸಿದರು. ಗೌರೀಶ ಶೆಣೈ ವಂದಿಸಿದರು.