ಸ್ಪೆಷಲ್ ಬಸ್ಸಿನಲ್ಲಿ ಚಾರ್ಜಿಂಗ್ ವ್ಯವಸ್ಥೆಯೂ ಇಲ್ಲ!

Update: 2023-05-15 18:41 GMT

ಮಾನ್ಯರೇ,

ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಅಧಿಕವಿದೆ. ಹೀಗಿರುವಾಗ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಸಾರಿಗೆ ಸಂಪರ್ಕವನ್ನು ಒದಗಿಸುವುದು ತೀರಾ ಅಗತ್ಯ. ರಾಜ್ಯ ಸರಕಾರಿ ಸಾರಿಗೆ ಸಂಸ್ಥೆಯ ರಾಜಹಂಸ(ಸ್ಪೆಷಲ್) ಬಸ್ಸು ಧರ್ಮಸ್ಥಳದಿಂದ ಮಧ್ಯಾಹ್ನ 3:30ಕ್ಕೆ ಹೊರಟರೆ, ರಾತ್ರಿ 10:30ಕ್ಕೆ ಬೆಂಗಳೂರು ತಲುಪುತ್ತದೆ. ಇದರ ಬೆಲೆಯು 618ರೂ. ಆಗಿದೆ. ಇನ್ನೊಂದು ರಾಜಹಂಸ(ಸ್ಪೆಷಲ್) ಬಸ್ಸು ರಾತ್ರಿ 10:30ಕ್ಕೆ ಧರ್ಮಸ್ಥಳದಿಂದ ಹೊರಟರೆ, ಮುಂಜಾನೆ 5ರ ಸಮಯಕ್ಕೆ ಬೆಂಗಳೂರು ತಲುಪುತ್ತದೆ. ಆದರೆ, ಇದರ ಬೆಲೆಯು 800 ರೂ. ಆಗಿದೆ. ಇಲ್ಲಿ ಗಮನಿಸಬೇಕಾದುದು ಎಂದರೆ ಒಂದೇ ರೀತಿಯ ವ್ಯವಸ್ಥೆ ಇರುವ ಬಸ್ಸಿಗೆ ಮಧ್ಯಾಹ್ನ ಒಂದು ದರ, ರಾತ್ರಿ ಇನ್ನೊಂದು ದರ ಹೇರುವುದು ಎಷ್ಟು ಸರಿ? ರಾತ್ರಿ ಸಮಯದಲ್ಲಿ ಹೆಚ್ಚು ಜನರು ಪ್ರಯಾಣಿಸುವ ಕಾರಣ ರಾತ್ರಿ ಪಾಳಿಯ ಬಸ್ಸಿಗೆ ಹೆಚ್ಚು ದರ ವಿಧಿಸಿ ಲಾಭ ಗಳಿಸುವುದು ಸಮಂಜಸವಲ್ಲ.

ಇನ್ನು ಈ ಬಸ್ಸು ಹೆಸರಿಗೆ ಮಾತ್ರ ಸ್ಪೆಷಲ್! ಅದು ನಿಗದಿ ಪಡಿಸಿದ ಸಮಯಕ್ಕೆ ಬರುವುದೇ ಇಲ್ಲ. ಆನ್‌ಲೈನ್ ಬುಕ್ ಮಾಡಿದರೂ, ಸಂಬಂಧ ಪಟ್ಟವರು ಕಾಲ್ ಮಾಡಿ ಮಾಹಿತಿ ತಿಳಿಸುವುದಿಲ್ಲ. ಚಾರ್ಜಿಂಗ್ ವ್ಯವಸ್ಥೆ ಸಹ ಇರುವುದಿಲ್ಲ. ಹೀಗಿರುವಾಗ ಅದಕ್ಕೆ ಹೆಚ್ಚು ದರ ವಹಿಸಿ ಜನರ ಜೇಬಿಗೆ ಕತ್ತರಿ ಯಾಕೆ ಹಾಕಲಾಗುತ್ತದೆ? ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ದರ ಕಡಿಮೆ ಮಾಡಿ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಪ್ರಯಾಣಿಸುವಂತೆ ಮಾಡಿ.
 

Similar News