×
Ad

ಏರ್ ಇಂಡಿಯಾದ ದಿಲ್ಲಿ-ಸಿಡ್ನಿ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ, ಪ್ರಯಾಣಿಕರಿಗೆ ಗಾಯ

Update: 2023-05-17 14:40 IST

ಹೊಸದಿಲ್ಲಿ: ಏರ್ ಇಂಡಿಯಾದ ದಿಲ್ಲಿ-ಸಿಡ್ನಿ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಅದರಲ್ಲಿದ್ದ ಸುಮಾರು ಏಳು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ದಿಲ್ಲಿಯಿಂದ ಸಿಡ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗಾಳಿಯ ಮಧ್ಯದಲ್ಲಿ ಪ್ರಕ್ಷುಬ್ಧತೆಯನ್ನು ಎದುರಿಸಿದ ಘಟನೆ ವರದಿಯಾಗಿದೆ.

ಘಟನೆಯಲ್ಲಿ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಸಿಡ್ನಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಪ್ರಯಾಣಿಕರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಏರ್ ಇಂಡಿಯಾದ ದಿಲ್ಲಿ-ಸಿಡ್ನಿ ವಿಮಾನದಲ್ಲಿ ಉಂಟಾದ  ತೀವ್ರ ಪ್ರಕ್ಷುಬ್ಧತೆಯಿಂದಾಗಿ  7 ಪ್ರಯಾಣಿಕರು ಗಾಯಗೊಂಡಿದ್ದಾರೆ. ಯಾವುದೇ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಡಿಜಿಸಿಎ ತಿಳಿಸಿದೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು ಹಾಗೂ  ನರ್ಸ್‌ನ ನೆರವಿನೊಂದಿಗೆ ಕ್ಯಾಬಿನ್ ಸಿಬ್ಬಂದಿ ಆನ್‌ಬೋರ್ಡ್ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಬಳಸಿಕೊಂಡು ಪ್ರಥಮ ಚಿಕಿತ್ಸೆ ನೀಡಿದರು, ”ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

Similar News