×
Ad

ಪೆಂಟಗಾನ್‌ ಬಳಿ ಸ್ಫೋಟವೆಂದು AI ನಿರ್ಮಿತ ಚಿತ್ರವನ್ನು ಪ್ರಸಾರ ಮಾಡಿದ ರಿಪಬ್ಲಿಕ್‌ ಟಿವಿ, ಇತರ ಮಾಧ್ಯಮಗಳು

Update: 2023-05-23 00:19 IST

ಹೊಸದಿಲ್ಲಿ: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯ ಪೆಂಟಗನ್ ಸಂಕೀರ್ಣದಲ್ಲಿ ಭಾರೀ ಸ್ಫೋಟದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  

ಪೆಂಟಗನ್ ಕಟ್ಟಡ ಸಂಕೀರ್ಣದಲ್ಲಿ ದಟ್ಟವಾದ ಹೊಗೆ, ಹಾಗೂ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಇದೇ ವೈರಲ್ ವಿಡಿಯೋ ಆಧಾರದಲ್ಲಿ ಹಲವು ಮಾಧ್ಯಮಗಳು ಇದನ್ನು ವರದಿ ಮಾಡಿದ್ದು, ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿ ಕೂಡಾ ಇದನ್ನು ನಿಜವೆಂದೇ ನಂಬಿ ವರದಿ ಬಿತ್ತರಿಸಿದೆ. ಅಲ್ಲದೆ, ಕಾರ್ಯತಂತ್ರದ ತಜ್ಞ ಎಂದು ಪ್ರೊ. ಮಾಧವ್ ನಲಪಾಟ್ ಎಂಬವರೊಂದಿಗೆ ವಿಶ್ಲೇಷಣೆಯನ್ನು ನಡೆಸಿದೆ. 

ಆದರೆ, ವೈರಲ್ ಆಗಿರುವ ವಿಡಿಯೋ ಹಾಗೂ ಚಿತ್ರಗಳು AI (ಕೃತಕ ಬುದ್ದಿಮತ್ತೆ) ಬಳಸಿ ರಚಿಸಲಾಗಿದ್ದು, ಪೆಂಟಗಾನ್ ನಲ್ಲಿ ಯಾವುದೇ ಸ್ಪೋಟಗಳೂ ನಡೆದಿಲ್ಲ. 

 ಸ್ಫೋಟದ ಸುದ್ದಿಯನ್ನು ಅಮೇರಿಕಾದ ಅಧಿಕಾರಿಗಳು ನಿರಾಕರಿಸಿದ್ದಾರೆ.  ಇಂದು ಬೆಳಗ್ಗೆ ಕಾಂಪ್ಲೆಕ್ಸ್‌ನಲ್ಲಿ ಅಥವಾ ಸಮೀಪದಲ್ಲಿ ಯಾವುದೇ ಸ್ಫೋಟ ಅಥವಾ ಅಂತಹ ಘಟನೆ ನಡೆದಿಲ್ಲ ಎಂದು ಪೆಂಟಗನ್‌ನಲ್ಲಿರುವ ಅಧಿಕಾರಿಗಳು ದೃಢಪಡಿಸಿದ್ದಾರೆ.

Similar News