ಚುನಾವಣಾ ಆಯೋಗದಿಂದ 193 ಚಿಹ್ನೆಗಳ ಪಟ್ಟಿ ಬಿಡುಗಡೆ

Update: 2023-05-23 15:12 GMT

ಹೊಸದಿಲ್ಲಿ, ಮೇ 23:  ಮಾನ್ಯತೆ ಪಡೆಯದ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆಗಳಲ್ಲಿ  ಸ್ಪರ್ಧಿಸುವ ಸಂದರ್ಭ ನೀಡಲು ಚುನಾವಣಾ ಆಯೋಗ ಇತ್ತೀಚೆಗೆ 193 ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳು ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಚಿಹ್ನೆಗಳ ಮೂಲಕ ಸ್ಪರ್ಧಿಸುವಾಗ, ಪಕ್ಷೇತರ ಹಾಗೂ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗ ಬಿಡುಗಡೆ ಮಾಡಿದ ಪಟ್ಟಿಯಿಂದ ಕಾಲಕಾಲಕ್ಕೆ ತಮ್ಮ ಚಿಹ್ನೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. 

ಈ 193 ಚಿಹ್ನೆಗಳಲ್ಲಿ ವಾಕಿಂಗ್ ಸ್ಟಿಕ್, ಬೇಬಿ ವಾಕರ್, ಏರ್ ಕಂಡಿಷನರ್, ಬಲೂನ್, ಬಳೆ, ತಳ್ಳು ಗಾಡಿ, ಸೀಟಿ, ಕಿಟಕಿ, ಉಣ್ಣೆ, ಸೂಜಿ, ಕಲ್ಲಂಗಡಿ, ಪರ್ಸ್, ವಯೋಲಿನ್, ವ್ಯಾಕ್ಯೂಮ್ ಕ್ಲೀನರ್ ಚಿಹ್ನೆಗಳು ಸೇರಿವೆ. 

Similar News