ದ್ವೇಷ ಭಾಷಣ ಪ್ರಕರಣ: ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ದೋಷಮುಕ್ತ
Update: 2023-05-24 14:14 IST
ಲಕ್ನೊ: ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ವಿರುದ್ಧ ರಾಂಪುರದ ಮಿಲಾಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ 2019 ರ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಂಪುರ ನ್ಯಾಯಾಲಯ ಅವರನ್ನು ಬುಧವಾರ ದೋಷಮುಕ್ತಗೊಳಿಸಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಎಂಪಿ ಎಂಎಲ್ಎ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಇಂದು ಆಝಂ ಅವರನ್ನು ಖುಲಾಸೆಗೊಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸಮಾಜವಾದಿ ನಾಯಕನನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ರಾಂಪುರ ನ್ಯಾಯಾಲಯವು ಇಂದು ರದ್ದುಗೊಳಿಸಿತು.
ದೇಶದಲ್ಲಿ ಮುಸ್ಲಿಮರು ನೆಲೆಸಲು ಕಷ್ಟಪಡುವ ವಾತಾವರಣವನ್ನು ಪ್ರಧಾನಿ ನಿರ್ಮಿಸುತ್ತಿದ್ದಾರೆ ಎಂದು ಸಮಾಜವಾದಿ ನಾಯಕ ಆರೋಪಿಸಿದ್ದರು.