ಕಾಂಗ್ರೆಸ್‌ನ "ಗ್ಯಾರಂಟಿಗಳ ಸೂತ್ರ" ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

Update: 2023-06-01 04:44 GMT

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಲೇವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) , ರಾಜ್ಯ ಸರಕಾರದ  ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಹಾಗೂ  ರಾಜ್ಯ ಚುನಾವಣೆಗಳಿಗೆ  ಪಕ್ಷ "ಗ್ಯಾರಂಟಿ ಫಾರ್ಮುಲಾ" ಮೊರೆ ಹೋಗಿದೆ. ಕಾಂಗ್ರೆಸ್‌ನ "ಗ್ಯಾರಂಟಿಗಳ ಸೂತ್ರ" ದೇಶವನ್ನು ದಿವಾಳಿಯಾಗಿಸುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿಯ ಜನಸಂಪರ್ಕ ಅಭಿಯಾನದ ಭಾಗವಾಗಿ ಅಜ್ಮೀರ್ ಹಾಗೂ  ಪುಷ್ಕರ್‌ಗೆ ಬುಧವಾರ ಭೇಟಿ ನೀಡಿದ ಪ್ರಧಾನಿ ಮೋದಿ ಭ್ರಷ್ಟಾಚಾರದ  ಕುರಿತಂತೆ  ಕಾಂಗ್ರೆಸ್‌ ವಿರುದ್ಧ  ಹರಿಹಾಯ್ದರು.

ಈ ತಿಂಗಳ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕರ್ನಾಟಕದಲ್ಲಿ  ಕಾಂಗ್ರೆಸ್‌ ನೀಡಿರುವ  ಐದು ಭರವಸೆಗಳ ಬಗ್ಗೆ ಸ್ಪಷ್ಟವಾಗಿ  ಉಲ್ಲೇಖಿಸಿದ , ಪ್ರಧಾನಿ ಮೋದಿ "ಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಹೊಂದಿದೆ. ಆದರೆ ಅವರು ತಮ್ಮ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ? ಅವರ ಗ್ಯಾರಂಟಿಗಳು ದೇಶವನ್ನು ದಿವಾಳಿಯಾಗಿಸುತ್ತದೆ’’ ಎಂದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಚಾರವು ಉಚಿತ ವಿದ್ಯುತ್‌ನಿಂದ  ಹಿಡಿದು ಅಗ್ಗದ ಅಡುಗೆ ಅನಿಲದವರೆಗೆ ಸಮಾಜ ಕಲ್ಯಾಣ ಯೋಜನೆಗಳ ಮೇಲೆ ಕೇಂದ್ರೀಕರಿಸಿದೆ.

"ಐವತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಬಡತನವನ್ನು ತೊಡೆದುಹಾಕುತ್ತೇನೆ  ಎಂದು ಭರವಸೆ ನೀಡಿತ್ತು . ಆದರೆ ಇದು ಬಡವರಿಗೆ ಅವರ ದೊಡ್ಡ ದ್ರೋಹವಾಗಿದೆ. ಬಡವರನ್ನು ದಾರಿ ತಪ್ಪಿಸುವುದು ಹಾಗೂ ಅವರನ್ನು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್‌ನ ನೀತಿಯಾಗಿದೆ. ಇದರಿಂದ ರಾಜಸ್ಥಾನದ ಜನರು ಸಹ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ... ರಾಜಸ್ಥಾನಕ್ಕೆ ಏನು ಸಿಕ್ಕಿದೆ? ಶಾಸಕರು, ಸಿಎಂ (ಮುಖ್ಯಮಂತ್ರಿ) ಹಾಗೂ  ಮಂತ್ರಿಗಳು ತಮ್ಮ ತಮ್ಮಲ್ಲೇ ಜಗಳವಾಡುತ್ತಾರೆ’’ ಎಂದು ಹೇಳಿದರು.

Similar News