ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆ ತಿರಸ್ಕರಿಸಿ, ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹಿಸಿದ 12 ಪಕ್ಷಗಳು

Update: 2023-06-06 05:03 GMT

ಹೊಸದಿಲ್ಲಿ: ಒಡಿಶಾದ ಬಾಲಸೋರ್ ರೈಲು ಅಪಘಾತದ ಸಿಬಿಐ ತನಿಖೆಯನ್ನು ತಿರಸ್ಕರಿಸಿದ ಕಾಂಗ್ರೆಸ್ ಹಾಗೂ  ಎಡಪಕ್ಷಗಳು ಸೇರಿದಂತೆ 12 ರಾಜಕೀಯ ಪಕ್ಷಗಳನ್ನು ಒಳಗೊಂಡ ಒಡಿಶಾ ಘಟಕವು ವಿಶೇಷ ತನಿಖಾ ತಂಡ ರಚನೆ ಹಾಗೂ  ನಿಷ್ಪಕ್ಷಪಾತ ತನಿಖೆಗೆ ದಾರಿ ಮಾಡಿಕೊಡಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡುವಂತೆ ಸೋಮವಾರ ಒತ್ತಾಯಿಸಿವೆ.

ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್, ಸಿಪಿಐ(ಎಂಎಲ್) ರೆಡ್ ಸ್ಟಾರ್, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಸಮಾಜವಾದಿ ಪಕ್ಷ, ಆರ್‌ಜೆಡಿ, ಎನ್‌ಸಿಪಿ, ಆರ್‌ಪಿಐ, ಎಎಪಿ ಹಾಗೂ  ಸಮತಾ ಕ್ರಾಂತಿ ದಳ ಸೇರಿದಂತೆ 12 ಪಕ್ಷಗಳು ಜಂಟಿ ಸಭೆ ನಡೆಸಿವೆ.  ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಯನ್ನು ತಿರಸ್ಕರಿಸಲಾಗಿದೆ  ಎಂದು ಹೇಳುವ ನಿರ್ಣಯವನ್ನು ಅಂಗೀಕರಿಸಿವೆ. ಕೇಂದ್ರೀಯ ತನಿಖಾ ಸಂಸ್ಥೆಯು "ಬಿಜೆಪಿಯ ಇಚ್ಛೆಯಂತೆ ಕೆಲಸ ಮಾಡುತ್ತಿದೆ" ಎಂದು ಆರೋಪಿಸಿವೆ.

ಪ್ರಕರಣದ ಕುರಿತು ಕೇಂದ್ರೀಯ ಎಸ್‌ಐಟಿಯಿಂದ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಪಕ್ಷಗಳು ಒತ್ತಾಯಿಸಿವೆ.

 ಆದಾಗ್ಯೂ, ಒಡಿಶಾದ ಆಡಳಿತಾರೂಢ ಬಿಜೆಡಿ,  ಸಿಬಿಐ ತನಿಖೆಯನ್ನು ಸ್ವಾಗತಿಸಿದೆ ಹಾಗೂ  ಘಟನೆಯ ಹಿಂದಿನ "ನಿಜವಾದ ಅಪರಾಧಿಯನ್ನು" ಹಿಡಿಯಲಾಗುವುದು ಎಂದು ಆಶಿಸಿದೆ.

Similar News