ರಂಗಾಯಣಕ್ಕೆ ಸಮರ್ಥರು ನಿರ್ದೇಶಕರಾಗಲಿ

Update: 2023-06-07 18:36 GMT

ಮಾನ್ಯರೇ,

ಪ್ರಸ್ತುತ ಮೈಸೂರಿನ ಕರ್ನಾಟಕ ರಂಗಾಯಣದ ನಿರ್ದೇಶಕರ ಸ್ಥಾನ ಖಾಲಿಯಾಗಿರುವುದರಿಂದ, ಈಗಾಗಲೇ ಅನೇಕರು ಈ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ.
 ಈ ಪ್ರತಿಷ್ಠಿತ ನಿರ್ದೇಶಕರ ಹುದ್ದೆಗೆ ಬರುವವರು ಕೆಲವೊಂದು ಅರ್ಹತೆಯನ್ನು ಹೊಂದಿರುವವರಾಗಿರಬೇಕು.
1.ಮೂಲತಃ ರಂಗ-ಭೂಮಿಯ ಆಳ-ಆಗಲ ತಿಳಿದವರಾಗಿರಬೇಕು.
2. ದೇಶದ ಚರಿತ್ರೆ ಮತ್ತು ಇತಿಹಾಸವನ್ನು ಬಲ್ಲವರಾಗಿರಬೇಕು.
3. ಯಾವುದೇ ರಾಜಕೀಯ ಪಕ್ಷಗಳ ‘ಚೇಲ’ಗಳಂತೆ ವರ್ತಿಸಬಾರದು.
4. ದಲಿತ, ನವ್ಯ, ನವೋದಯ ಸಾಹಿತ್ಯವನ್ನು ಓದಿಕೊಂಡವರಾಗಿರಬೇಕು.
5. ಪ್ರಾಮಾಣಿಕ ಮತ್ತು ಪಾರದರ್ಶಕತೆ ಹೊಂದಿರುವವರಾಗಿರಬೇಕು.
6. ಜಾತ್ಯತೀತ ಮನೋಭಾವದ, ಎಲ್ಲ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯಬೇಕು.
7. ರಂಗಭೂಮಿಗೆ ಹೆಚ್ಚು ಯುವ ಸಮುದಾಯವನ್ನು ಪರಿಚಯಿಸುವಂತಾಗಬೇಕು.
8. ತಮ್ಮ ವೈಯಕ್ತಿಕ ವಿಚಾರಗಳನ್ನು ಇನ್ನೊಬ್ಬರ ಮೇಲೆ ಬಲವಂತವಾಗಿ ಹೇರಬಾರದು.
9. ರಂಗಾಯಣ ಕ್ರಿಯಾತ್ಮಕವಾಗಿ ಸದಾ ಚಟುವಟಿಕೆಯಿಂದ ಕೂಡಿರುವಂತಾಗ ಬೇಕು.
10. ಮುಖ್ಯವಾಗಿ, ರಂಗಭೂಮಿಯ ಯಾವುದೇ ಚಟುವಟಿಕೆಗಳು ಪೊಲೀಸರ ಸರ್ಪಗಾವಲಿನಲ್ಲಿ ನಡೆಯದೆ ರಂಗಾಸಕ್ತರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ಭಾಗವಹಿಸುವಂತಾಗಬೇಕು.
ಈ ಎಲ್ಲ ಗುಣ-ಲಕ್ಷಣಗಳು ಇದ್ದವರನ್ನು ಮಾತ್ರ ಸರಕಾರ ನಿರ್ದೇಶಕರನ್ನಾಗಿ ಆಯ್ಕೆ ಮಾಡುವಂತಾಗಲಿ.
 

Similar News